ಕಾನತ್ತೂರಿನಲ್ಲಿಚಿರತೆ ಭೀತಿ:ನಿಮಿಷಗಳೊಳಗಾಗಿ ಎರಡು ಚಿರತೆ ಪ್ರತ್ಯಕ್ಷ
ಬೋವಿಕ್ಕಾನ: ಮುಳಿಯಾರು ಪಂಚಾಯತ್‌ಗೊಳಪಟ್ಟ ಕಾನತ್ತೂರಿ ನಲ್ಲಿ ಮತ್ತೆ ಚಿರತೆಗಳ ಭೀತಿ ಆವರಿಸಿದೆ.
ಕಾನತ್ತೂರು ನೆಯ್ಯಂಗಯದಲ್ಲಿ ಮೊನ್ನೆ ರಾತ್ರಿ ನಿಮಿಷಗಳೊಳಗೆ ಎರಡು ಚಿರತೆಗಳನ್ನು ಕಂಡಿರುವುದಾಗಿ ಪ್ರದೇಶವಾಸಿಗಳು ತಿಳಿಸಿದ್ದಾರೆ. ಕಾನತ್ತೂರು-ನೆಯ್ಯಂಗಯ ರಸ್ತೆ ಬಳಿಯಿರುವ ಎಂ. ರಾಘವನ್ ನಾಯರ್‌ರ ಮನೆಯ ೭೫ ಮೀಟರ್ ದೂರದಲ್ಲಿ ಮೊದಲು ಚಿರತೆಯೊಂದು ಪ್ರತ್ಯಕ್ಷಗೊಂಡಿದೆ. ಮದುವೆ ಸಮಾರಂ ಭದಲ್ಲಿ ಭಾಗವಹಿಸಿ ರಾತ್ರಿ ಕಾರಿನಲ್ಲಿ ಸಂಚರಿಸು ತ್ತಿದ್ದ ನಾವು ದಾರಿ ಮಧ್ಯೆ ದೊಡ್ಡ ಗಾತ್ರದ ಚಿರತೆ ರಸ್ತೆ ದಾಟುತ್ತಿರು ವುದನ್ನು ಕಂಡಿರುವುದಾಗಿ ಆ ಕಾರಿನಲ್ಲಿದ್ದ ಗಂಗಾಧ ರನ್ ನಾಯರ್ ಎಂಬವರು ಹೇಳಿದ್ದಾರೆ. ಇದಾದ ಐದು ನಿಮಿಷದ ಬಳಿಕ ಇದೇ ದಾರಿಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದವರೂ ಬೇರೊಂದು ಚಿರತೆಯನ್ನು ಕಂಡಿರುವುದಾಗಿಯೂ ಅದು ದೊಡ್ಡ ಗಾತ್ರದ ಚಿರತೆಯಾಗಿ ತ್ತೆಂದು ತಿಳಿಸಿದ್ದಾರೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಅರಣ್ಯ ಇಲಾಖೆಯ ರ‍್ಯಾಪಿಡ್ ರೆಸ್ಪೋನ್ಸ್ ಟೀಂನ ಫಾರೆಸ್ಟರ್ ಎಂ. ಚಂದ್ರನ್ ನೇತೃತ್ವದ ಅರಣ್ಯ ಪಾಲಕರು ಆಗಮಿಸಿ ವ್ಯಾಪಕ ಶೋಧ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ. ಶೋಧ ಕಾರ್ಯಾ ಚರಣೆ ಇನ್ನೂ ಮುಂದುವರಿಯುತ್ತಿದೆ.
ಜೂನ್ 17ರಂದು ಇರಿಯಣ್ಣಿ ತೋಣಿಪಳ್ಳದ ಬಿ. ನಾರಾಯಣನ್ ಎಂಬವರ ಮನೆ ಆವರಣಕ್ಕೆ ನುಗ್ಗಿ ಬಂದ ಚಿರತೆಯೊಂದು ಅವರ ಸಾಕು ನಾಯಿಯನ್ನು ಕಚ್ಚಿ ಎಳೆದೊಯ್ದಿತ್ತು. ಅದಾದ ಮೂರು ದಿನಗಳ ಬಳಿಯ ಕಾನತ್ತೂರು ತೈರೆ ರಸ್ತೆಯಲ್ಲಿ ಊರವರು ಚಿರತೆಯೊಂದನ್ನು ಕಂಡಿದ್ದರು. ಆದರೆ ಅದು ಚಿರತೆ ಯಾಗಿದೆ ಎಂಬುವುದನ್ನು ಅರಣ್ಯ ಪಾಲಕರು ದೃಢೀಕರಿಸಿರಲಿಲ್ಲ. ಈ ಪ್ರದೇಶದ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರಾಗಳಲ್ಲಿ ಚಿರತೆ ಚಿತ್ರ ಅಂದು ಕಂಡಿರಲಿಲ್ಲ.
ನೆಯ್ಯಂಗಯದಲ್ಲಿ ಒಂದೆಡೆ ಚಿರತೆ ಭೀತಿ ತಲೆಯೆತ್ತಿದರೆ ಇನ್ನೊಂದೆಡೆ ಮುಳಿಯಾರು ಪಂಚಾಯತ್‌ನ ಇತರೆಡೆಗಳಲ್ಲಿ ಕಾಡಾನೆಗಳ ಹಾವಳಿ ವರ್ಷಗ ಳಿಂದಲೇ ಮುಂದುವರಿಯುತ್ತಿದೆ.
ಒಟ್ಟಾರೆಯಾಗಿ ಈ ಪ್ರದೇಶದ ಜನರು ಈಗ ವನ್ಯಜೀವಿಗಳ ಭೀತಿಯಲ್ಲಿ ಕಳೆಯಬೇಕಾದ ಸ್ಥಿತಿ ಸಂಚಾತವಾಗಿದೆ.