ಕಾನೂನು ಉಲ್ಲಂಘಿಸಿ ವಾಹನ ಚಾಲನೆ ವ್ಯಾಪಕ: ಕಠಿಣ ಕ್ರಮಗಳತ್ತ ಪೊಲೀಸ್

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ.   ಪ್ರಾಯಪೂರ್ತಿಯಾಗದವರು ಹಾಗೂ ಪ್ರಾಯ ಪೂರ್ತಿ ಯಾದರೂ ಲೈಸನ್ಸ್ ಪಡೆಯದೆ ವಾಹನ ಚಲಾಯಿಸುತ್ತಿರುವುದು ವ್ಯಾಪಕಗೊಂ ಡಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ನಿನ್ನೆ ಸಂಜೆ ಎಸ್‌ಐ ನಿಖಿಲ್ ನೇತೃತ್ವದಲ್ಲಿ ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಪ್ರಾಯಪೂರ್ತಿಯಾಗದ ಬಾಲಕ ಸ್ಕೂಟರ್ ಚಲಾಯಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈ ಸಂಬಂಧ ಸ್ಕೂಟರ್‌ನ ಆರ್‌ಸಿ ಮಾಲಕನಾದ ಪೈವಳಿಕೆ ಪಾಕ ಹೌಸ್‌ನ ಅಬ್ದುಲ್ ರಹಿಮಾನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಅಲ್ಲದೆ ಸ್ಕೂಟರ್ ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಇದೇ ರೀತಿಯಲ್ಲಿ ಹದಿನೈದು ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಯಪೂರ್ತಿ ಯಾದರೂ ಲೈಸನ್ಸ್ ಪಡೆಯದೆ ವಾಹ ಚಲಾಯಿಸುವುದು, ಮದ್ಯ ಸೇವಿಸಿ, ಅಪರಿಮಿತ ವೇಗದಲ್ಲಿ ವಾಹನ ಚಲಾ ಯಿಸುವ ಪ್ರಕರಣವೂ ಹೆಚ್ಚುತ್ತಿದೆ. ಇದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page