‘ಕಾಪಾ’ ಕ್ರಮ ಇನ್ನಷ್ಟು ಬಿಗಿಗೊಳಿಸಲು ತೀರ್ಮಾನ
ಕಾಸರಗೋಡು: ಕೇರಳ ಆಂಟಿ ಸೋಶ್ಯಲ್ ಆಕ್ಟಿವೇಟೀಸ್ ಪ್ರಿವೆಶ್ಶನ್ ಆಕ್ಟ್ (ಕಾಪಾ) ಕಾನೂನು ಅವಲಂ ಬಿತ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿ ಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಇದಕ್ಕೆ ಹೊಂದಿಕೊಂ ಡಿರುವ ಮುಂದಿನ ಕ್ರಮಗಳನ್ನು ಪೊಲೀಸರು ಇನ್ನಷ್ಟು ಬಿಗಿ ಗೊಳಿಸಿದ್ದಾರೆ.
ಕಾಪಾ ಕಾನೂನು ಪ್ರಕಾರದ ಕೇಸಿನಲ್ಲಿ ಸಿಲುಕಿ ನಿಗದಿತ ಸಮಯ ದೊಳಗಾಗಿ ತಮ್ಮ ಊರಿಗೆ ಪ್ರವೇಶಿ ಬಾರದೆಂಬ ನಿಬಂಧನೆ ಪ್ರಕಾರ ಊರಿನಿಂದ ಹೊರಹಾಕಲ್ಪಡುವ ಕಾಪಾ ಆರೋಪಿಗಳು, ಆ ನಿಬಂಧನೆಯನ್ನು ಉಲ್ಲಂಘಿಸಿ ಊರಿಗೆ ಹಿಂತಿರುಗಿದ್ದಲ್ಲಿ ಅವರನ್ನು ಇನ್ನು ಪೊಲೀಸರು ತಕ್ಷಣ ಬಂಧಿಸಿ ಜೈಲಿಗಟ್ಟುವರು.
ಜೈಲಿನಿಂದ ಬಿಡುಗಡೆಗೊಳ್ಳುವ ಕಾಪಾ ಆರೋಪಿಗಳ ನಂತರ ಸಂಪೂರ್ಣ ಚಲನವಲನಗಳ ಮೇಲೆ ಪೊಲೀಸರು ಸದಾ ನಿಗಾ ಇರಿಸುವರು. ಮಾತ್ರವಲ್ಲ ಅವರ ಪೂರ್ಣ ಮಾಹಿತಿಗಳನ್ನು ಪದೇ ಪದೇ ಸಂಗ್ರಹಿಸುವರು. ಇದು ಮಾತ್ರವಲ್ಲ ಇತರ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಇತರ ಎಲ್ಲಾ ಆರೋಪಿಗಳ ಮೇಲೂ ಪೊಲೀಸರು ಇನ್ನು ಸದಾ ನಿಗಾ ಇರಿಸಲಿದ್ದಾರೆ. ನಿರಂತರವಾಗಿ ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗುವವರನ್ನು ಗುರುತಿಸಿ ಅವರ ವಿರುದ್ಧ ‘ಕಾಪಾ’ ಕಾನೂನು ಹೇರುವ ಕ್ರಮವನ್ನು ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ.
ಪಾಲ್ಘಾಟ್ ನೈಮಾರ್‌ನಲ್ಲಿ ನೆರೆಮನೆ ನಿವಾಸಿಯನ್ನು ಕೊಂದು ಬಂಧಿತನಾಗಿ ಜೈಲು ಸೇರಿದ ಆರೋಪಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡು ಜೈಲಿನಿಂದ ಹೊರ ಬಂದ ಬಳಿಕ ಅದೇ ಕುಟುಂಬದ ಇಬ್ಬರನ್ನು ಮತ್ತೆ ಕೊಲೆಗೈದ ಘಟನೆ ಇಡೀ ಕೇರಳವನ್ನೇ ನಡುಗಿಸಿತ್ತು. ಅದು ಪೊಲೀಸರನ್ನು ತೀವ್ರ ಟೀಕೆಗೂ ಸಿಲುಕಿಸುವಂತೆಯೂ ಮಾಡಿತ್ತು. ಇದುವೇ ಕಾಪಾ ಆರೋಪಿಗಳ ಮೇಲಿನ ಕ್ರಮವನ್ನು ಇನ್ನಷ್ಟು ಬಿಗಿಗೊಳಿಸಲು ಪೊಲೀಸ್ ಇಲಾಖೆ ಈಗ ಮುಂದಾಗಿರುವುದರ ಪ್ರಧಾನ ಹಿನ್ನೆಲೆಯಾಗಿದೆ.