ಕಾಪ: ಹಲವು ಪ್ರಕರಣಗಳ ಆರೋಪಿ ಬಂಧನ: ಸೆಂಟ್ರಲ್ ಜೈಲಿಗೆ
ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನನ್ನು ವಿದ್ಯಾನಗರ ಪೊಲೀಸರು ಕಾಪಾ ಕಾನೂನು ಹೇರಿ ಬಂಧಿಸಿದ್ದಾರೆ. ಉಳಿಯತ್ತಡ್ಕ ಎಸ್.ಪಿ ನಗರ ಬಿಸ್ಮಿಲ್ಲಾ ಮಂಜಿಲ್‌ನ ಮೊದೀನ್ ಎಂ.ಎಚ್. ಅಲಿಯಾಸ್ ಚರುಮುರಿ ಮೊದೀನ್ (28) ಬಂಧಿತನಾದ ಆರೋಪಿ.
ವಿದ್ಯಾನಗರ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್, ಎಸ್‌ಐ ಅಜೀಶ್, ಪೊಲೀಸರಾದ ನಿಜನ್, ರೆಜೀಶ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ನಂತರ ಆತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.