ಕಾರಡ್ಕ ಸಹಕಾರಿ ಸಂಘ ವಂಚನೆ ಪ್ರಕರಣ: ಈಗಲೂ ತಲೆಮರೆಸಿಕೊಂಡ ಮುಖ್ಯ ಆರೋಪಿ: ಮತ್ತೆ 21ಪವನ್ ಚಿನ್ನ ಪತ್ತೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76  ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದ ಮುಖ್ಯ ಆರೋಪಿ ಕರ್ಮಂತ್ತೋಡಿ ಬಾಳಕಂಡದ ರತೀಶನ್ ಈಗಲೂ ತಲೆಮರೆಸಿಕೊಂ ಡಿದ್ದಾನೆ. ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿ ಶಿಬು ಪಾಪಚ್ಚನ್ ಹಾಗೂ ಬೇಕಲ ಡಿವೈಎಸ್ಪಿ ಜಯನ್ ಡೊಮಿನಿಕ್ ಎಂಬಿವರ ನೇತೃತ್ವದ ಪೊಲೀಸ್ ತಂಡ ವ್ಯಾಪಕ ಹುಡುಕಾಟ ಮುಂದುವರಿಸುತ್ತಿ ರುವುವಾಗಲೂ ಸೊಸೈಟಿಯ ಸೆಕ್ರೆಟರಿಯೂ ಮಾಜಿ ಸಿಪಿಎಂ ನೇತಾರನಾದ ರತೀಶನ್ ತಲೆಮರೆಸಿಕೊಂಡಿದ್ದಾನೆ. ಈ ಮಧ್ಯೆ ವಂಚನೆ ನಡೆಸಿದ ಚಿನ್ನದ ಪೈಕಿ 21 ಪವನ್ ಚಿನ್ನವನ್ನು ತನಿಖಾ ತಂಡ ಪತ್ತೆಹಚ್ಚಿದೆ. ಕೇರಳ ಬ್ಯಾಂಕ್‌ನ ಪೆರಿಯ ಶಾಖೆಯಲ್ಲಿ ಅಡವಿರಿಸಿದ 7.34 ಲಕ್ಷ ರೂಪಾಯಿಗಳ 21 ಪವನ್ ಚಿನ್ನವನ್ನು ಡಿವೈಎಸ್ಪಿ ಶಿಬು ಪಾಪಚ್ಚನ್‌ರ ನೇತೃತ್ವದ ತನಿಖಾ ತಂಡ ಪತ್ತೆಹಚ್ಚಿ ವಶಪಡಿಸಿಕೊ ಂಡಿದೆ. ವಂಚನೆ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಕಾಞಂಗಾಡ್ ನೆಲ್ಲಿಕ್ಕಾಡ್‌ನ ಅನಿಲ್ ಕುಮಾರ್‌ನ ಸಂಬಂಧಿಕನ ಹೆಸರಲ್ಲಿ ಅಡವಿರಿಸಿದ ಚಿನ್ನ  ಇದಾಗಿದೆಯೆಂ ದು ತನಿಖೆಯಲ್ಲಿ ತಿಳಿದುಬಂದಿದೆ. ಇದರೊಂದಿಗೆ ವಂಚನೆ ನಡೆಸಿದ ಚಿನ್ನದಲ್ಲಿ 1.6  ಕಿಲೋ ಚಿನ್ನವನ್ನು ತನಿಖಾ ತಂಡ ಪತ್ತೆಹಚ್ಚಿ ವಶಪಡಿ ಸಿದೆ.  ಇದೇ  ವೇಳೆ ಮುಖ್ಯ ಆರೋ ಪಿ ರತೀಶನ್ ಹಾಗೂ ಈತನ ಸಹಚರ ಕಣ್ಣೂರು ನಿವಾಸಿ ಜಬ್ಬಾರ್ ತಲೆಮರೆಸಿಕೊಂಡಿರುವುದು ತನಿಖಾ ತಂಡದಲ್ಲಿ ತಲೆನೋವಾಗಿ ಪರಿಣಮಿಸಿದೆ.

RELATED NEWS

You cannot copy contents of this page