ಕಾರಡ್ಕ ಸೊಸೈಟಿಯಿಂದ4.76 ಕೋಟಿ ರೂ. ಲಪಟಾವಣೆ: ರತೀಶ್, ಜಬ್ಬಾರ್ ತಮಿಳುನಾಡಿಗೆ ಪರಾರಿ: ಆರೋಪಿಗಳು ವಿದೇಶಕ್ಕೆ ಪಲಾಯನಗೈಯ್ಯಲು ಸಾಧ್ಯತೆಯೆಂಬ ಮುನ್ನೆಚ್ಚರಿಕೆ

ಮುಳ್ಳೇರಿಯ: ಮುಳ್ಳೇರಿಯದಲ್ಲಿ ಕಾರ್ಯಾಚರಿಸುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂಪಾಯಿಗಳ ವಂಚನೆ ಪ್ರಕರಣದ ಮುಖ್ಯ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿದ್ದಾರೆ. ಕರ್ಮಂತ್ತೋಡಿ ಬಾಳಕಂಡಂ ನಿವಾಸಿಯೂ, ಸೊಸೈಟಿ ಸೆಕ್ರೆಟರಿಯಾದ ಕೆ. ರತೀಶ್, ಈತನ ಸಹಚರ ಕಣ್ಣೂರು  ತಾಳೆಚೊವ್ವ ನಿವಾಸಿಯೂ ಪಯ್ಯನ್ನೂರಿನಲ್ಲಿ ವಾಸಿಸುವ ಜಬ್ಬಾರ್ ಎಂಬಿವರು ತಮಿಳುನಾಡಿಗೆ ಪರಾರಿಯಾಗಿರುವುದಾಗಿ ಸೂಚನೆ ಲಭಿಸಿದೆ. ಬೆಂಗಳೂರು, ಹಾಸನ ಎಂಬಿಡೆಗಳಲ್ಲಿ ತಲೆಮರೆಸಿಕೊಂಡಿದ್ದ ಇವರು ಶಿವಮೊಗ್ಗಕ್ಕೆ ತಲುಪಿರು ವುದಾಗಿ ತನಿಖಾ ತಂಡ ಪತ್ತೆಹಚ್ಚಿತ್ತು. ಸೈಬರ್‌ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಈ ಬಗ್ಗೆ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವ ಜಿಲ್ಲಾ ಕ್ರೈಂಬ್ರಾಂಚ್‌ನ ನಿರ್ದೇಶಪ್ರಕಾರ ಮೇಲ್ಪರಂಬ ಎಸ್‌ಐ ಹಾಗೂ ತಂಡ ಶಿವಮೊಗ್ಗಕ್ಕೆ ತೆರಳಿತ್ತು. ಆದರೆ ಯಾವುದೇ ಕ್ಷಣದಲ್ಲಿ ಪೊಲೀಸರು ತಮ್ಮನ್ನು ಹುಡುಕಿಬರಲು ಸಾಧ್ಯತೆ ಯಿದೆಯೆಂದು ತಿಳಿದುಕೊಂಡ ಜಬ್ಬಾರ್ ಹಾಗೂ ರತೀಶ್ ತಮಿಳುನಾಡಿಗೆ ಪರಾರಿಯಾಗಿ ರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಇದೇ ವೇಳೆ ತಲೆಮರೆಸಿ ಕೊಂಡ ಬಳಿಕ ರತೀಶ್ ಪತ್ನಿಗೆ ಫೋನ್ ಕರೆ ಮಾಡಿದ್ದು, ವಾಟ್ಸಪ್ ನಲ್ಲಿ ಸಂದೇಶ ರವಾನಿಸಿರು ವುದಾಗಿಯೂ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಶಿವಮೊಗ್ಗದಿಂದ ಪರಾರಿಯಾದ ಬಳಿಗ ಅವರಿಬ್ಬರು  ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ.  ತಮಿಳುನಾಡಿಗೆ ಪರಾರಿಯಾದ ಅವರು ಚೆನ್ನೈ ವಿಮಾನ ನಿಲ್ದಾಣ ಮೂಲಕ ವಿದೇಶಕ್ಕೆ ಪಲಾಯನ ಗೈಯ್ಯಲು ಸಾಧ್ಯತೆಯಿರುವು ದಾಗಿಯೂ ಗುಪ್ತಚರ ವಿಭಾಗಗಳು ವರದಿಮಾಡಿವೆ. ಈಮಧ್ಯೆ  ಸೊಸೈಟಿ ವಂಚನೆ ಪ್ರಕರಣದಲ್ಲಿ  ಸಂಬಂಧವಿ ರುವುದಾಗಿ ಪೊಲೀಸರು ಸಂಶ ಯಿಸುವ ಕಾಸರಗೋಡು ನಿವಾಸಿ ಕೂಡಾ ಗಲ್ಫ್‌ಗೆ ಪರಾರಿ ಯಾಗಲು ಸಾಧ್ಯತೆಯಿದೆಯೆಂದೂ  ಆದ್ದರಿಂದ ಆತನನ್ನು ಕೂಡಲೇ ಕಸ್ಟಡಿಗೆ ತೆಗೆಯಬೇಕೆಂದು ವರದಿಯ ಲ್ಲಿ ತಿಳಿಸಿರುವುದಾಗಿ  ಸೂಚನೆಯಿದೆ.

You cannot copy contents of this page