ಕಾರಡ್ಕ ಸೊಸೈಟಿ ವಂಚನೆ ಪ್ರಕರಣ:ಸೆಕ್ರೆಟರಿ, ಸೂತ್ರಧಾರನಿಗಾಗಿ ಹುಡುಕಾಟ ಮುಂದುವರಿಕೆ

ಮುಳ್ಳೇರಿಯ: ಕಾರಡ್ಕ ಅಗ್ರಿ ಕಲ್ಚರಿಸ್ಟ್ ವೆಲ್ಫೇರ್ ಕೋಆಪರೇಟಿವ್ ಸೊಸೈಟಿಯಲ್ಲಿ ಭಾರೀ ವಂಚನೆ ನಡೆದಿ ದ್ದರೂ ಅದರ ಎಲ್ಲಾ ಆರೋಪಿಗಳನ್ನು ಸೆರೆ ಹಿಡಿಯಲು ಸಾಧ್ಯವಾಗದಿರುವುದು ನಾಡಿನಲ್ಲಿ ಚರ್ಚೆಗೆ ಕಾರಣವಾಗಿದೆ. ವಂಚನೆಗೆ ಸಂಬಂಧಿಸಿ ಸೊಸೈಟಿಯ ಸೆಕ್ರೆಟರಿ, ಸಿಪಿಎಂ ಲೋಕಲ್ ಕಮಿಟಿ ಸದಸ್ಯನಾದ ರತೀಶನ್ ಹಾಗೂ ವಂಚನೆಯ ಸೂತ್ರಧಾರ ಕಣ್ಣೂರು ನಿವಾಸಿ ಜಬ್ಬಾರ್ ಎಂಬಿವರಿಗಾಗಿ ತನಿಖಾ ತಂಡ ಹುಡುಕಾಟ ಮುಂದುವರಿಸಿದೆ. ವಂಚನೆ ಬೆಳಕಿಗೆ ಬಂದು ಕೇಸು ದಾಖಲಿಸುವುದರೊಂದಿಗೆ ಈ ಇಬ್ಬರು ಪರಾರಿಯಾಗಿದ್ದಾರೆ. ಇವರು ಪರಾರಿಯಾಗಿ ಹಲವು ದಿನಗಳು ಕಳೆದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇವರು ಮೊದಲು ಬೆಂಗಳೂರಿನಲ್ಲಿದ್ದಾರೆಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖಾತಂಡ ಅತ್ತ ತೆರಳಿದಾಗ ಆರೋಪಿಗಳು ಅಲ್ಲಿಂದ ಹಾಸನ, ಶಿವಮೊಗ್ಗ, ಮೈಸೂರು ಎಂಬೆಡೆಗಳಿಗೆ ಪರಾರಿಯಾಗಿರುವುದಾಗಿ ತಿಳಿದು ಬಂದಿತ್ತು.

ಸೊಸೈಟಿಯಲ್ಲಿ ಒಟ್ಟು 4.76 ಕೋಟಿ ರೂಪಾಯಿಗಳ ವಂಚನೆ ನಡೆದಿರುವುದಾಗಿ ದೂರಲಾಗಿದೆ. ವಂಚನೆ ಬಗ್ಗೆ ಜಿಲ್ಲಾ ಕ್ರೈಮ್ ಬ್ರಾಂಚ್ ತನಿಖೆ ನಡೆಸುತ್ತಿದೆ. ಈ ವಂಚನೆಗೆ ಸಂಬಂಧಿಸಿ ಇದುವರೆಗೆ ಮೂರು ಮಂದಿಯನ್ನು ಬಂಧಿಸಲಾಗಿದೆ. ಸೊಸೈಟಿಯಿಂದ ಹಣ, ಚಿನ್ನಾಭರಣ ಲಪಟಾಯಿಸಲು ಒತ್ತಾಸೆಗೈದ ಆರೋಪದಂತೆ ಪಳ್ಳಿಕೆರೆ ಪಂಚಾಯತ್ ಸದಸ್ಯ ಬೇಕಲ ಹದ್ದಾದ್‌ನಗರದ ಕೆ. ಅಹಮ್ಮದ್ ಬಶೀರ್, ಪರಕ್ಕಳಾಯಿ ಏಳನೇ ಮೈಲಿನ ಎ. ಅಬ್ದುಲ್ ಗಫೂರ್, ಕಾಞಂಗಾಡ್ ನೆಲ್ಲಿಕಾಡ್‌ನ ಎ. ಅನಿಲ್ ಕುಮಾರ್ ಎಂಬಿವರನ್ನು ಬಂಧಿ ಲಾಗಿತ್ತು. ಇವರನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಿದಾಗ ಕೇರಳ ಬ್ಯಾಂಕ್‌ನ ಕಾಞಂಗಾಡ್ ಶಾಖೆಯಲ್ಲಿ ಅಡವಿರಿಸಿದ 48.5 ಲಕ್ಷ ರೂಪಾಯಿ ಗಳ ಚಿನ್ನವನ್ನು ವಶಪಡಿಸಲಾಗಿದೆ.

You cannot copy contents of this page