ಕಾರು ಢಿಕ್ಕಿ: ಪಾದಚಾರಿ ವೃದ್ಧೆ ಮೃತ್ಯು

ಉಪ್ಪಳ: ಕಾರು ಢಿಕ್ಕಿ ಹೊಡೆದು ಪಾದಚಾರಿ ವೃದ್ಧೆ ಮೃತಪಟ್ಟ ಘಟನೆ ನಿನ್ನೆ ತುರ್ತಿಯಲ್ಲಿ ಸಂಭವಿಸಿದೆ. ಭಗವತಿ ಗೇಟ್ ಸಮೀಪದ ತುರ್ತಿ ಹೆದ್ದಾರಿ ಬದಿ ನಡೆದುಕೊಂಡು  ಹೋಗುತ್ತಿದ್ದ ಭಗವತೀ ಕ್ಷೇತ್ರ ಸಮೀಪ ನಿವಾಸಿ ಅಕ್ಕಮ್ಮ ಶೆಟ್ಟಿ (೮೫) ಮೃತಪಟ್ಟವರು. ಇವರಿಗೆ ತಲಪಾಡಜಿ ಭಾಗದಿಂದ ಆಗಮಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅಕ್ಕಮ್ಮರನ್ನು ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಅಲ್ಪ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ. ಕಾರನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು, ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.

ದಿ| ಕೃಷ್ಣ ಶೆಟ್ಟಿಯವರ ಪತ್ನಿಯಾದ ಅಕ್ಕಮ್ಮ ಶೆಟ್ಟಿ, ಮಕ್ಕಳಾದ ವಿಠಲ ಶೆಟ್ಟಿ, ಐತಪ್ಪ ಶೆಟ್ಟಿ, ಉಮೇಶ ಶೆಟ್ಟಿ, ಜಯಂತಿ ಶೆಟ್ಟಿ, ರತ್ನಾವತಿ ಶೆಟ್ಟಿ, ಕುಸುಮ ರೈ, ಸುಮತಿ ಶೆಟ್ಟಿ, ಉಷಾ ಶೆಟ್ಟಿ, ಅಳಿಯಂದಿರಾದ ಚಂದ್ರಶೇಖರ ಶೆಟ್ಟಿ, ಪ್ರಬಾಕರ ಶೆಟ್ಟಿ, ವೆಂಕಪ್ಪ ರೈ, ಸೊಸೆಯಂದಿರಾದ ಗೀತಾ ಶೆಟ್ಟಿ, ಸುಪ್ರಿಯ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಮನೋಜ್ ಶೆಟ್ಟಿ, ಸೊಸೆ ವಸಂತಿ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page