ಕಾರು- ಬಸ್ ಢಿಕ್ಕಿ ಮಂಡೆಕಾಪು ನಿವಾಸಿಗೆ ಗಾಯ
ಉಪ್ಪಳ: ಕಾರು-ಬಸ್ ಮಧ್ಯೆ ಉಂಟಾದ ಅಪಘಾತದಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕುಡಾಲುಮೇರ್ಕಳ ಮಂಡೆಕಾಪು ನಿವಾಸಿ ದಿ| ಬಾಲಕೃಷ್ಣರ ಪುತ್ರ, ಗ್ಯಾರೇಜ್ ಮಾಲಕ ವಿಶ್ವನಾಥ ಯಾನೆ ವಿಷ್ಣು (32) ಗಾಯಗೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಕಾರಿನಲ್ಲಿ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ವೇಳೆ ಬಿ.ಸಿ ರೋಡ್ ಬಳಿಯ ಪಾಣೆ ಮಂಗಳೂರಿನಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರÀÄ ಮಂಗಳೂರಿನಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕನ್ಯಾನ ಹಾಗೂ ಪೆರ್ಮುದೆ ಯಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿದ್ದು, ಸಾಮಾಗ್ರಿ ತರಲೆಂದು ವಿಟ್ಲದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆನ್ನಲಾಗಿದೆ. ಕಾರು ಜಖಂ ಗೊಂಡಿದೆ.