ಕಾರು ಹೊಂಡಕ್ಕೆ ಮಗುಚಿ ತಂದೆ, ಪುತ್ರ ಸಹಿತ ಮೂವರು ಮೃತ್ಯು

ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಮಗುಚಿ ಬಿದ್ದು ಮೂರು ಮಂದಿ ಮೃತಪಟ್ಟ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಸುಳ್ಯದ ಜಟ್ಟಿಪಳ್ಳ ಕಾನತ್ತಿಲ ನಿವಾಸಿಗಳಾದ ಅಣ್ಣು ನಾಯ್ಕ್, ಪುತ್ರ ಚಿದಾನಂದ,  ಸಂಬಂಧಿಕ ರಮೇಶ್ ಎಂಬವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ಮೂರು ಮಂದಿ ಅಪಘಾತ ತಕ್ಷಣ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಚಿದಾನಂದ ಚಿಕ್ಕಮಗಳೂರು ಜಿಲ್ಲಾ ಕಾರ್ಮಿಕ ಖಾತೆ ಇಲಾಖೆಯಲ್ಲಿ ನೌಕರನಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page