ಕಾರ್ಮಾರು ಕ್ಷೇತ್ರದಲ್ಲಿ ದೇವತಾ ಪ್ರತಿಷ್ಠೆ: ಮಾತೃಸಂಗಮ ಇಂದು
ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಿನ್ನೆ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಗಣಪತಿಹೋಮ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. 10 ಗಂಟೆಗೆ ಯಕ್ಷಗಾನ ತಾಳಮದ್ದಳೆ ಜರಗಿತು. ಅಪರಾಹ್ನ ಸಾಹಿತ್ಯ ಗಾನ ನೃತ್ಯ ವೈಭವ, ಸಂಜೆ ಮಾತೃಸಂಗಮ ನಡೆಯಲಿದ್ದು, ಒಡಿಯೂರು ಶ್ರೀ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು.
ಡಾ. ಮಹೇಶ್ವರಿ ಯು. ಅಧ್ಯಕ್ಷತೆ ವಹಿಸುವರು. ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಉದ್ಘಾಟಿಸುವರು. ಈಶ್ವರಿ ಬೇರ್ಕಡವು ಮಾತೃಸಂದೇಶ ನೀಡುವರು. ರಾತ್ರಿ ನೃತ್ಯಾಮೃತಂ ಪ್ರದರ್ಶನಗೊಳ್ಳಲಿದೆ.