ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕಾಲೇಜು ವಿದ್ಯಾರ್ಥಿ ಮನೆಯ ಕೊಠಡಿ ಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ. ಪೆರಿಯ ಚಾಲಿಂ ಗಾಲ್ ಕುಟ್ಟಿಯಡ್ಕ ನಿವಾಸಿ ಹಾಗೂ ಚಾಲಿಂಗಾಲ್ ಎನ್. ಎಸ್. ಕಾಲೇಜಿನ ಪ್ರಥಮ ವರ್ಷ ಬಿಕಾಂ ವಿದ್ಯಾರ್ಥಿ ಶಾರೋನ್ (19) ಸಾವನ್ನಪ್ಪಿದ ಯುವಕ. ನಿನ್ನೆ ಮಧ್ಯಾಹ್ನ ಈತನ ಮೃತದೇಹ ಮನೆಯ ಕೊಠಡಿ ಯೊಳಗೆ ನೇಣು ಬಿಗಿದು ಸಾವನ್ನ ಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗಲ್ಫ್ ಉದ್ಯೋಗಿ ವೇಲಾ ಯುಧನ್‌ರ ಪುತ್ರನಾಗಿರುವ ಶರೋನ್‌ನ ತಾಯಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದರು. ನಂತರ ಶರೋನ್ ತನ್ನ ದೊಡ್ಡಮ್ಮನ ಜೊತೆ ವಾಸಿಸುತ್ತಿದ್ದನು.
ಮೃತನು ಸಹೋದರಿ ಹರಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.