ಕಾಸರಗೋಡಿನಲ್ಲೂ ಲೋಪ ತಿದ್ದುಪಡಿಗೆ ಮುಂದಾದ ಸಿಪಿಎಂ: ಅಪರಿಮಿತ ಸೊತ್ತು ಸಂಪಾದಿಸಿದ ಯುವ ನೇತಾರನ ವಿರುದ್ಧ ತನಿಖೆ
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಉಂಟಾದ ದಯ ನೀಯ ಸೋಲಿನ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲೂ ತಪ್ಪುಗಳ ತಿದ್ದುಪಡಿ ಕ್ರಮಗಳಿಗೆ ಸಿಪಿಎಂ ಚಾಲನೆ ನೀಡಿದೆ.
ಅಪರಿಮಿತವಾಗಿ ಸೊತ್ತು ಸಂಪಾದಿಸಿದ ಯುವ ನೇತಾರನ ವಿರುದ್ಧ ಪಕ್ಷ ತನಿಖೆ ಆರಂಭಿಸಿದೆ. ಉದುಮ ಏರಿಯಾ ಕಮಿಟಿ ಸದಸ್ಯನ ವಿರುದ್ಧ ತನಿಖೆ ನಡೆಯಲಿದೆ. ಏರಿಯಾ ಕಮಿಟಿ ಸದಸ್ಯರಾದ ಕೆ.ವಿ. ಭಾಸ್ಕರನ್, ಟಿ. ನಾರಾಯಣನ್, ಎನ್.ಪಿ. ರಾಜೇಂ ದ್ರನ್ ಎಂಬಿವರನ್ನೊ ಳಗೊಂಡ ಆಯೋಗವನ್ನು ಏರಿಯಾ ಕಮಿಟಿ ಸಭೆಯಲ್ಲಿ ಈ ಕುರಿತಾಗಿ ತನಿಖೆಗಾಗಿ ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯ ಕೆ.ಪಿ. ಸತೀಶ್ಚಂದ್ರನ್, ಜಿಲ್ಲಾ ಸೆಕ್ರೆಟರಿ ಯೇಟ್ ಸದಸ್ಯ ಕೆ.ಪಿ. ಕುಂಞಿರಾ ಮನ್ ಜಿಲ್ಲಾ ಸಮಿತಿ ಸದಸ್ಯ ಕೆ. ಕುಂಞಿರಾಮನ್ ಎಂಬಿವರು ಪಾಲ್ಕೊಂಡ ಏರಿಯಾ ಕಮಿಟಿ ಸಭೆ ತನಿಖಾ ಆಯೋಗವನ್ನು ನೇಮಿಸಿದೆ. ಆರೋಪ ವಿಧೇಯನಾದ ಏರಿಯಾ ಕಮಿಟಿ ಸದಸ್ಯನ ಆದಾಯ ಹಾಗೂ ಖರ್ಚಿನಲ್ಲಿ ಭಾರೀ ವ್ಯತ್ಯಾಸವಿದೆ ಯೆಂದು ದೂರುಂಟಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎರಡಂತಸ್ತಿನ ಮನೆ ನಿರ್ಮಿಸಲಾಗಿದೆ. ಉದ್ಯೋಗ ಲಭಿಸಲು 50 ಲಕ್ಷ ರೂಪಾಯಿ ನೀಡಲಾಗಿದೆ. 22 ಲಕ್ಷ ರೂಪಾಯಿ ಗಳ ಕಾರು ಖರೀದಿಸಲಾ ಗಿದೆ ಎಂಬಿತ್ಯಾದಿ ಆರೋಪಗಳು ಯುವ ನೇತಾರನ ವಿರುದ್ಧ ಕೇಳಿ ಬಂದಿದೆ.
ಇದೇ ವೇಳೆ ಬ್ಯಾಂಕ್‌ನಿಂದ ಸಾಲ ಪಡೆದಿರುವುದಾಗಿ ಆರೋಪ ವಿಧೇಯನಾದ ನೇತಾರ ತಿಳಿಸಿದ್ದಾರೆ. ಆದರೆ ಈ ಹೇಳಿಕೆಯಲ್ಲಿ ಸಮಾಧಾ ನವುಂಟಾಗದ ಹಿನ್ನೆಲೆಯಲ್ಲಿ ತನಿಖಾ ಆಯೋಗವನ್ನು ನೇಮಿಸಲಾಗಿ ದೆಯೆಂದು ತಿಳಿದುಬಂದಿದೆ.