ಕಾಸರಗೋಡಿನ ಎಟಿಎಂಗೆ ತುಂಬಿಸಲು ನೀಡಿದ 43.33 ಲಕ್ಷ ರೂ.ಲಪಟಾವಣೆ: ಬಳ್ಳೂರು, ಕಯ್ಯಾರು ನಿವಾಸಿಗಳಾದ ಇಬ್ಬರ ವಿರುದ್ದ ಕೇಸು
ಕಾಸರಗೋಡು: ಎಟಿಎಂಗೆ ತುಂಬಿಸಲು ನೀಡಿದ 43,33,000 ರೂಪಾಯಿಗಳನ್ನು ಲಪಟಾಯಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಇಬ್ಬರ ವಿರುದ್ಧ ಕಾಸರ ಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸಿಎAಎಸ್ ಇನ್ಫೋಸಿಸ್ ಲಿಮಿಟೆಡ್ ಕಂಪೆನಿ ಆಪರೇಶನ್ ಬ್ರಾಂಡ್ ಮೆನೇಜರ್ ಕಲ್ಲಿಕೋಟೆ ಎರಿಂuಟಿಜeಜಿiಟಿeಜಪಾಲA ನಿವಾಸಿ ಶ್ರೀಜ್ಯೋತಿಷ್ ನೀಡಿದ ದೂರಿನಂತೆ ಮೊಗ್ರಾಲ್ ಪುತ್ತೂರು ಬಳ್ಳೂರು ಎಡಚ್ಚೇರಿ ನಿವಾಸಿ ಶರತ್ ಕುಮಾರ್ ಶೆಟ್ಟಿ (36), ಉಪ್ಪಳ ಕಯ್ಯಾರಿನ ಕೆ. ದಿವಾಕರನ್ (33) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಇಬ್ಬರು ದೂರುದಾತ ಮೆನೇಜರ್ ಆಗಿರುವ ಕಂಪೆನಿಯ ಎಟಿಎಂ ಕ್ಯಾಶ್ ಲೋಡಿಂಗ್ ನೌಕರನಾಗಿದ್ದಾರೆ.
2024 ಜನವರಿ 1 ಹಾಗೂ ಡಿಸೆಂಬರ್ 13ರ ಮಧ್ಯೆಗಿನ ದಿನಗಳಲ್ಲಿ ಎಟಿಎಂನಲ್ಲಿ ತುಂಬಿಸಲು ನೀಡಿದ್ದ 85,38,000 ರೂಪಾಯಿಗಳನ್ನು ಲೋಡ್ ಮಾಡಿಲ್ಲವೆಂದೂ ದೂರಿನಲ್ಲಿ ತಿಳಿಸಲಾಗಿದೆ. ಈ ಮೊತ್ತದಿಂದ 42,05,000 ರೂಪಾಯಿಗಳನ್ನು ಕಂಪೆನಿಗೆ ಮರಳಿ ನೀಡಲಾಗಿದೆ. ಆದರೆ ಬಾಕಿ ಮೊತ್ತ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.