ಕಾಸರಗೋಡು ಟೌನ್ ಬ್ಯಾಂಕ್ಗೆ ರಿಸರ್ವ್ ಬ್ಯಾಂಕ್ನಿಂದ ಮನ್ನಣೆ
ಕಾಸರಗೋಡು: ಭಾರತೀಯ ರೀಸರ್ವ್ ಬ್ಯಾಂಕ್ನ ಮಾನದಂಡಕ್ಕ ನುಗುಣವಾಗಿ 2022-23 ನೇ ಸಾಲಿನ ಎಫ್. ಎಸ್ ಆಂಡ್ ಡಬ್ಲ್ಯೂ. ಎಂ. ಫೈನಾನ್ಸಿಲಿ ಸೌಂಡ್ ಆಂಡ್ ವೆಲ್ ಮ್ಯಾನೇಜಡ್ ಬ್ಯಾಂಕ್ ಎಂದು ಕಾಸರಗೋಡು ಕೆÀÆÃ-ಆಪರೇಟಿವ್ ಟೌನ್ ಬ್ಯಾಂಕ್ ಗೆ ಅಂಗೀಕಾರ ದೊರಕಿದೆ. ಇದರ ಅಂಗವಾಗಿ ಟೌನ್ ಬ್ಯಾಂಕ್ ಸೆಂಟಿನರಿ ಹಾಲ್ ನಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹಕಾರ ಭಾರತೀಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಡಾ ಉದಯ ಜೋಶಿ ಟೌನ್ ಬ್ಯಾಂಕ್ನ ಈ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಬ್ಯಾಂಕ್ ನ ಈ ಸಾಧನೆಗೆ ಸಂಸ್ಥೆ ಯ ನೌಕರರ ಪ್ರಾಮಾಣಿಕ ಪ್ರಯತ್ನ, ಗ್ರಾಹಕರ ಪ್ರೋತ್ಸಾಹ, ಬ್ಯಾಂಕ್ ನ ಆಡಳಿತ ಮಂಡಳಿಯ ದಕ್ಷತೆ ಹಾಗೂ ಜನರ ಬೆಂಬಲ ಕಾರಣವೆಂದರು. ಸಹಕಾರ ಭಾರತೀಯ ಆಡಳಿತ ದಲ್ಲಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಿ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೌನ್ ಬ್ಯಾಂಕ್ ಚೆಯರ್ಮೆನ್ ಅಡ್ವೊಕೇಟ್ ಎ.ಸಿ ಅಶೋಕ್ ಕುಮಾರ್ ವಹಿಸಿದ್ದರು. ಕಾಸರಗೋಡಿನ ಹಿರಿಯ ನ್ಯಾಯವಾದಿ ಐ. ವಿ ಭಟ್, ಆರ್ ಎಸ್ ಎಸ್ ಕಣ್ಣೂರು ಜಿಲ್ಲಾ ಸಹ ಕಾರ್ಯವಾಹಕ ಲೋಕೇಶ್ ಜೋಡುಕಲ್ಲು, ಸಹಕಾರ ಭಾರತೀಯ ಪ್ರಾಂತ ಉಪಾಧ್ಯಕ್ಷ ಐತ್ತಪ್ಪ ಮವ್ವಾರ್ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕ್ ನ ನೌಕರ ಸಂಘ ದ ಕಾರ್ಯದರ್ಶಿ ಕಮಲಾಕ್ಷ. ಕೆ. ಶುಭಾಶಂಸನೆ ಗೈದರು. ಕೆ. ಎಂ ಹೇರಳ ಸ್ವಾಗತಿಸಿ, ಬ್ಯಾಂಕ್ ಸಿ ಇ ಒ ಸುರೇಶ್ ಕುಮಾರ್ ವಂದಿಸಿದರು.