ಕಾಸರಗೋಡು ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಕಾಸರಗೋಡು:  ರೋಟರಿ ಕ್ಲಬ್‌ನ ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಐ.ಎಂ.ಎ ರಾಜ್ಯ ಅಧ್ಯಕ್ಷ ಡಾ| ಜೋಸೆಫ್ ಬೆನೇವನ್ ಉದ್ಘಾಟಿಸಿದರು. ರೊಟೇರಿಯನ್ ಡಾ| ಬಿ. ನಾರಾಯಣ ನಾಯ್ಕ್ ಅಧ್ಯಕ್ಷರಾಗಿ, ರೊಟೇರಿಯನ್ ಹರಿಪ್ರಸಾದ್ ಕಾರ್ಯದರ್ಶಿಯಾಗಿಯೂ, ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಬಡವರಿಗೆ ೩ ಹೊಸ ಮನೆಗಳು, ವೃದ್ಧರಿಗೆ ಆರೋಗ್ಯ ಸಂರಕ್ಷಣೆ, ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಪರಿಪಾಲನೆ, ಅರಣ್ಯೀಕರಣ, ಹೊಸ ರೋಟ್ರಾಕ್ಟ್ ಕ್ಲಬ್, ವೈದ್ಯಕೀಯ ಶಿಬಿರಗಳು ಸಹಿತ ಈ ವರ್ಷದ ಹಲವಾರು ಯೋಜನೆ ಗಳನ್ನು ಅಧ್ಯಕ್ಷ ಬಿ. ನಾರಾಯಣ ನಾಯ್ಕ್ ಘೋಷಿಸಿದರು. ಅಸಿಸ್ಟೆಂಟ್ ಗವರ್ನರ್ ವಿ.ವಿ. ಹರೀಶ್, ವಲಯ ಕೋ-ಆರ್ಡಿನೇಟರ್ ಎಂ.ಕೆ. ರಾಧಾಕೃಷ್ಣನ್,  ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಚೆಯರ್‌ಮೆನ್ ಎಂ.ಟಿ. ದಿನೇಶ್, ಗವರ್ನರ್ ಗ್ರೂಪ್ ರೆಪ್ರಸೆಂಟೇಟಿವ್ ಡಾ| ಜನಾರ್ದನ ನಾಯ್ಕ್, ಡಾ| ಸುರೇಶ್‌ಬಾಬು, ಆರ್. ಪ್ರಶಾಂತ್ ಕುಮಾರ್ ಮಾತನಾಡಿದರು. ಕ್ಲಬ್ ಬುಲೆಟಿನ್‌ನನ್ನು ಡಾ| ಎಸ್. ಜ್ಯೋತಿಯವರಿಗೆ ನೀಡಿ ಬಿಡುಗಡೆಗೊಳಿ ಸಲಾಯಿತು. ಕಾರ್ಯದರ್ಶಿ ಕೆ. ಹರಿಪ್ರಸಾದ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page