ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿಗೆ 160.23 ಕೋಟಿ ರೂ. ಮಂಜೂರು

ಕಾಸರಗೋಡು: ಉಕ್ಕಿನಡ್ಕದಲ್ಲಿ ಕಳೆದ 11 ವರ್ಷಗಳ ಹಿಂದೆ ನಿರ್ಮಾಣ ಕೆಲಸ ಆರಂಭಿಸಿ ಇನ್ನೂ ನಿರ್ಮಾಣ ಪೂರ್ತಿಗೊಳ್ಳದ ಕಾಸರಗೋಡು  ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಭಿವೃದ್ಧಿಗಾಗಿ ರಾಜ್ಯ ಸರಕಾರ 160.23ರೂ. ಕೋಟಿ ರೂ. ಮಂಜೂರು ಮಾಡಿದೆ. ಕಿಫ್‌ಬಿ ಮೂಲಕ ಈಗ ಹಣ ಮಂಜೂರು ಮಾಡಲಾಗಿದೆ. ನಬಾರ್ಡ್‌ನ ಆರ್ಥಿಕ ನೆರವಿನಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡದ ನಿರ್ಮಾಣ ಕೆಲಸ ಆರಂಭಗೊಂಡು ವರ್ಷಗಳೇ ಸಂದಿವೆ. ಆದರೆ ಅದರ ನಿರ್ಮಾಣ ಕೆಲಸ ಈ ತನಕ ಪೂರ್ತಿಗೊಂಡಿಲ್ಲ. ಮಾತ್ರವಲ್ಲ ವೈದ್ಯಕೀಯ ಕಾಲೇಜು ಆಗಲೀ, ಉನ್ನತ ಮಟ್ಟದ ಚಿಕಿತ್ಸಾಕ್ರಮವಾಗಲಿ ಇಲ್ಲಿ ಇನ್ನೂ ಆರಂಭಗೊಂಡಿಲ್ಲ. ಈ ಯೋಜನೆಯನ್ನು ವರ್ಷಗಳಿಂದ ನಿರ್ಲಕ್ಷಿಸುತ್ತ ಬರಲಾಗಿದೆ. ನಿರ್ಲಕ್ಷ್ಯದ ವಿರುದ್ಧ ಭಾರೀ ಹೋರಾಟಗಳು ಒಂದೆಡೆ  ನಡೆಯುತ್ತಿದೆ.

ಇಂತಹ ಸಂದರ್ಭದಲ್ಲೇ ಈ ಕಟ್ಟಡದ ನಿರ್ಮಾಣ ಕೆಲಸ ಪೂರ್ತೀಕರಿಸಲು ಸರಕಾರ ಕಿಫ್‌ಬಿ ಮೂಲಕ ಈ ಮೊತ್ತ ಹೊಸದಾಗಿ ಮಂಜೂರು ಮಾಡಿದೆ.

You cannot copy contents of this page