ಕಿಫ್‌ಬಿ ರಸ್ತೆಗಳಲ್ಲೂ ಟೋಲ್: ಕಾನೂನು ನಿರ್ಮಾಣಕ್ಕೆ ಸಚಿವ ಸಂಪುಟ ಅನುಮತಿ
ತಿರುವನಂತಪುರ: ರಾಜ್ಯದಲ್ಲಿ ಕಿಫ್‌ಬಿ ಯೋಜನೆ ಪ್ರಕಾರ ನಿರ್ಮಿಸುವ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದಲೂ ಇನ್ನು ಮುಂದೆ ಟೋಲ್ ಸಂಗ್ರಹಿಸಲು ಸರಕಾರ ಆಲೋಚಿಸುತ್ತಿರುವುದಾಗಿ ವರದಿಯಾಗಿದೆ. ೫೦ ಕೋಟಿ ರೂಪಾ ಯಿಗಿಂತ ಹೆಚ್ಚು ಮೊತ್ತ ವ್ಯಯಿಸಿ ನಿರ್ಮಿಸಿದ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಲಾಗುವುದು. ಇದಕ್ಕೆ ಸಂಬಂಧಪಟ್ಟು ಕಾನೂನು ನಿರ್ಮಾ ಣಕ್ಕೆ ಸಚಿವ ಸಂಪುಟದ ಅನುಮತಿ ಲಭಿಸಿದೆ.
ಸರಕಾರ ಸಾಲ ಪಡೆಯುವು ದರಿಂದ ಉಂಟಾಗುವ ಸಂದಿಗ್ಧತೆ ಯನ್ನು ಟೋಲ್ ಸಂಗ್ರಹ ಮೂಲಕ ಪರಿಹರಿಸಬಹುದೆಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಗ್ರಹಿಸುವ ರೀತಿಯಲ್ಲೇ ಕಿಫ್‌ಬಿ ಟೋಲ್ ಸಂಗ್ರಹಿಸಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ದೂರ ಎಂದು ಲೆಕ್ಕ ಹಾಕದೆ ಪ್ರತೀ ಬೂತ್‌ನಲ್ಲೂ ಟೋಲ್ ಶುಲ್ಕ ನೀಡಬೇಕಾಗುತ್ತಿದೆ. ಆದರೆ ಕಿಫ್‌ಬಿ ರಸ್ತೆಗಳಲ್ಲಿ ಪ್ರಯಾಣಿಸುವ ದೂರಕ್ಕೆ ಮಾತ್ರ ಟೋಲ್ ನೀಡಿದರೆ ಸಾಕಾಗುವುದು. ಸ್ಥಳೀಯ ವ್ಯಕ್ತಿಗಳನ್ನು ಟೋಲ್‌ನಿಂದ ಹೊರತುಪಡಿಸಲಾ ಗುವುದು. ಇಡೀ ವೇಳೆ ಟೋಲ್ ಸಂಗ್ರಹಿಸುವ ಬಗ್ಗೆ ಕಿಫ್‌ಬಿ ಅಧ್ಯಯನ ಆರಂಭಿಸಿತ್ತು. ಕಿಫ್‌ಬಿ ತೆಗೆಯುವ ಸಾಲ ರಾಜ್ಯದಲ್ಲಿ ಸಾರ್ವಜನಿಕ ಸಾಲದಲ್ಲಿ ಒಳಪಡಿಸಿರುವುದರಿಂದ ಕಿಫ್‌ಬಿಯ ನಿರ್ಮಾಣ ಚಟುವಟಿಕೆಗಳಿಗೆ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಟೋಲ್ ಸಂಗ್ರಹ ಮೂಲಕ ಸಮಸ್ಯೆ ಪರಿಹರಿಸಲು ಆಲೋಚಿಸಲಾಗಿದೆ.