ಕಿರಣ್ ಪ್ರಸಾದ್ ಕೂಡ್ಲು ಇವರಿಗೆ ಸ್ಕೌಟ್ಸ್‌ನ ಮೆಡಲ್ ಆಫ್ ಮೆರಿಟ್ ಪ್ರಶಸ್ತಿ
ಕಾಸರಗೋಡು : ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಮಟ್ಟದಲ್ಲಿ ಉತ್ತಮ ಸ್ಕೌಟು ಅಧ್ಯಾಪಕರಿಗೆ ನೀಡುವ ಉನ್ನತ ಪ್ರಶಸ್ತಿ ಮೆಡಲ್ ಓಫ್ ಮೆರಿಟ್ ಕಾಸರಗೋಡು ಜಿಲ್ಲೆಯ ಕಿರಣ್ ಪ್ರಸಾದ್ ಕೂಡ್ಲು ಅವರಿಗೆ ಲಭಿಸಿದೆ. ಇವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸ್ಕೌಟ್ ಅಧ್ಯಾಪಕರಾಗಿದ್ದು ಸ್ಕೌಟಿಂಗ್ ನಲ್ಲಿ ಹಿಮಾಲಯ ವೃಕ್ಷಮಣಿಧಾರಕರ ತರಬೇತಿ ಹೊಂದಿದವರು. ಇವರು ಉತ್ತರಾಖಂಡದ ಹರಿದ್ವಾರ, ದೆಹಲಿಯ ಬುರಾರಿ, ಆಂದ್ರದ ಹೈದರಾಬಾದ್, ಕರ್ನಾಟಕದ ಮೈಸೂರಿನಲ್ಲಿ ಜರಗಿದ ರಾಷ್ಟçಮಟ್ಟದ ಜಾಂಬೂರಿಯಲ್ಲಿ ಜಿಲ್ಲಾ ಪ್ರತಿನಿಧಿಯಾಗಿ, ತ್ರಿಪುರದ ಅಗರ್ತಲ, ಕರ್ನಾಟಕದ ಬೆಳ್ಗಾಂ, ತಮಿಳುನಾಡಿನ ಚೆನೈಯಲ್ಲಿ ಜರಗಿದ ಸಾಂಸ್ಕೃತಿಕ ವಿನಿಮಯ ಶಿಬಿರ ಹಾಗು ಇತ್ತೀಚೆಗೆ ಮೂಡುಬಿದ್ರೆಯಲ್ಲಿ ಜರಗಿದ ಅಂತರಾಷ್ಟಿçÃಯ ಸಾಂಸ್ಕೃತಿಕ ವಿನಿಮಯ ಶಿಬಿರದಲ್ಲಿ ಕೇರಳ ತಂಡದ ನಾಯಕನಾಗಿ ಭಾಗವಹಿಸಿದ್ದಾರೆ. ಕಣ್ಣೂರು, ಕಲ್ಲಿಕೋಟೆ, ಮಲಪ್ಪರಂ, ತಿರುವನಂತಪುರ ಹಾಗು ತ್ರಿಶೂರ್‌ನಲ್ಲಿ ಜರಗಿದ ರಾಜ್ಯಮಟ್ಟದ ಕೇಂಪೂರಿಗಳಲ್ಲಿ ಜಿಲ್ಲಾತಂಡದ ಉಸ್ತುವಾರಿವಹಿಸಿ ಭಾಗವಹಿಸಿದ್ದಾರೆ. ಕೊಚ್ಚಿಯ ನೇವಲ್ ಬೇಸ್‌ನಲ್ಲಿ ಜರಗಿದ ಸೀ ಸ್ಕೌಟ್ ತರಬೇತಿಯನ್ನೂ ಪಡೆದಿದ್ದಾರೆ. ಕೇರಳ ರಾಜ್ಯದ ಸ್ನೇಹಭವನ ಎಂಬ ಯೋಜನೆಯ ಅಡಿಯಲ್ಲಿ ಇವರ ಸಂಚಾಲಕತ್ವದಲ್ಲಿ ಬಂದಡ್ಕ, ಉಪ್ಪಳ, ಪುತ್ತಿಗೆ ಹಾಗು ಬದಿಯಡ್ಕದಲ್ಲಿ ನಾಲ್ಕು ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.
ಜಿಲ್ಲೆಯಲ್ಲಿರುವ ಉತ್ತಮ ಸ್ಕೌಟು ದಳಗಳಲ್ಲೊಂದಾದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಸ್ಕೌಟುಗಳನ್ನು ತರಬೇತುಗೊಳಿಸಿ ಹಲವು ಮಂದಿ ರಾಜ್ಯ ಪುರಸ್ಕಾರ ಮತ್ತು ರಾಷ್ಟçಪತಿ ಪುರಸ್ಕಾರ ಪಡೆಯುವಲ್ಲಿ ಸಫಲರಾಗಿದ್ದಾರೆ.