ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್‌ರಿಂದ ಬಡವರಿಗೆ ಆರ್ಥಿಕ ನೆರವು

ಬದಿಯಡ್ಕ: ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್‌ರ ಮನೆಯಲ್ಲಿ ನಡೆದ ಪೂಜೆಯ ಸಂದರ್ಭದಲ್ಲಿ ಬಡ ಜನರಿಗೆ ಆರ್ಥಿಕ ನೆರವು ವಿತರಿಸಿದ್ದಾರೆ.  ಇದರಲ್ಲಿ ಯೋಗೀಶ್ ಆಚಾರ್ಯ ವರ್ಕಾಡಿ ಅವರ ಚಿಕಿತ್ಸೆಗೆ, ಲೀಲಾ ಬಾಡೂರುಪದವು ಅವರ ಮಕ್ಕಳ ಶಿಕ್ಷಣಕ್ಕೆ, ಆಯಿಷತ್ ಮಾಜಿದ ಮಜೀರ್ಪಳ್ಳಕಟ್ಟೆ ಇವರ ಶಿಕ್ಷಣಕ್ಕೆ ಹಾಗೂ ಸವಿತಾ ಕಿದೂರು ಎಂಬವರಿಗೆ ಧನ ಸಹಾಯ ನೀಡಲಾಗಿದೆ. ಕಾರ್ಯಕ್ರಮದಲ್ಲಿ ವೇ|ಮೂ| ಗೋಪಾಲಕೃಷ್ಣ ಭಟ್, ವೇ|ಮೂ ಮಹಾಲಿಂಗೇಶ್ವರ ಭಟ್ ಮಣಿಮುಂಡ, ವಿಷ್ಣು ಭಟ್, ಶಾರದಾ ಸಾಯಿರಾಂ ಭಟ್, ಈಶ್ವರ ಭಟ್ ಕಾನ, ವೇಣುಗೋಪಾಲ ಕಿಳಿಂಗಾರು, ಸಂದೇಶ ವಾರಣಾಸಿ, ಶಿವಕುಮಾರ, ಸಂಜೀವ ರೈ ಮಾವಿನಕಟ್ಟೆ ಉಪಸ್ಥಿತರಿದ್ದರು.

You cannot copy contents of this page