ಕುಂಟಂಗೇರಡ್ಕದಲ್ಲಿ ಹುಚ್ಚು ನಾಯಿ ಕಡಿತ: ಮಹಿಳೆ ಸಹಿತ ೮ ಮಂದಿಗೆ ಗಾಯ

ಕುಂಬಳೆ: ಹುಚ್ಚು ಹಿಡಿದ ಬೀದಿನಾಯಿಯ ಕಡಿತದಿಂದ ಮಹಿಳೆ ಸಹಿತ ಎಂಟು ಮಂದಿ ಗಾಯಗೊಂ ಡಿದ್ದಾರೆ. ಕುಂಟಂಗೇರಡ್ಕ ವೆಲ್ಫೇರ್ ಸ್ಕೂಲ್ ಸಮೀಪದ ಎಸ್.ಸಿ. ಕಾಲನಿ ನಿವಾಸಿಗಳಾದ ಸುನಿತ (೪೩), ಬ್ರಿಜೇಶ್ (೨೧),  ಹರಿಶ್ರೀ (೨೧), ಸರಾಸ್ (೧೧) ಎಂಬಿವರ ಸಹಿತ ಎಂಟು ಮಂದಿಗೆ ಹುಚ್ಚುನಾಯಿ ಕಡಿತದಿಂದ ಗಾಯಗಳಾಗಿದೆ. ಈ ಪೈಕಿ ಸುನಿತಾ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  ಆದರೆ ಅಲ್ಲಿ ಚುಚ್ಚು ಮದ್ದು ನೀಡಿದ ಬಳಿಕ ಗಾಯಕ್ಕೆ ಔಷಧಿ ಹಚ್ಚಲು ಕೂಡಾ ಮುಂದಾಗದೆ ಅವರನ್ನು ಮರಳಿ ಮನೆಗೆ ಕಳುಹಿಸಿರುವು ದಾಗಿ ದೂರಲಾಗಿದೆ.  ನಿನ್ನೆ ಸಂಜೆ ವೇಳೆ ಎಲ್ಲಿಂದಲೋ ಓಡಿ ಬಂದ ಹುಚ್ಚು ನಾಯಿ ಎದುರು ಸಿಕ್ಕಿದವರಿಗೆಲ್ಲಾ ಕಚ್ಚಿ ಗಾಯಗೊಳಿಸಿದೆ. ಬಳಿಕ ನಾಗರಿಕರು ಸೇರಿ ಆ ನಾಯಿಯನ್ನು ಹೊಡೆದು ಕೊಂಡು ಹೂತು ಹಾಕಿದ್ದಾರೆ.

RELATED NEWS

You cannot copy contents of this page