ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ವಿರುದ್ಧ ರಂಗಕ್ಕಿಳಿಯಲು ಸರ್ವಪಕ್ಷ ಸಭೆ ನಿರ್ಧಾರ; ಚಳವಳಿ ಘೋಷಣೆ ಇಂದು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ-ಚೆಂಗಳ ರೀಚ್‌ನಲ್ಲಿ ತಾತ್ಕಾಲಿಕ ಟೋಲ್ ಸಂಗ್ರಹ ಬೂತ್ ಸ್ಥಾಪಿಸಲಿರುವ ಯತ್ನದ ವಿರುದ್ಧ ಶಾಸಕ ಎ.ಕೆ.ಎಂ. ಅಶ್ರಫ್‌ರ ಉಪಸ್ಥಿತಿಯಲ್ಲಿ ಸರ್ವಪಕ್ಷ ಸಭೆ ನಡೆಯಿತು.

ಕುಂಬಳೆ ಸೇತುವೆ  ಆರಿಕ್ಕಾಡಿ ಕಡವತ್ ಗೇಟ್ ಸಮೀಪ ನಿರ್ಮಿ ಸುವ ಟೋಲ್ ಬೂತ್  ಹೊರತು ಪಡಿಸಬೇಕೆಂದು ಸಭೆ ಒತ್ತಾಯಿಸಿದೆ. ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಬೇಕೆಂಬ ಬೇಡಿಕೆ ಮುಂದಿರಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾ ಯಿತು.  ಇದೇ ವೇಳೆ ಟೋಲ್ ಬೂತ್ ವಿರುದ್ಧ ಚಳವಳಿ ಘೋಷಣೆ ಇಂದು ನಡೆಯಲಿದೆ. ಸಭೆಯನ್ನು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಅಡಿಶಲ್ ಎಸ್‌ಐ ರಾಜೀವ್, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವ್ಯಾಪಾರಿಗಳು, ಸ್ವಸಹಾಯ ಸಂಘಗಳ  ಕಾರ್ಯಕರ್ತರು ಭಾಗವಹಿಸಿದರು. 

RELATED NEWS

You cannot copy contents of this page