ಕುಂಬಳೆಯಲ್ಲಿ ನಿಲ್ಲಿಸಿದ್ದ ಬಸ್ಗಳಿಂದ ಡೀಸೆಲ್ ಕಳವು
ಕುಂಬಳೆ: ರಾತ್ರಿ ವೇಳೆ ನಿಲುಗಡೆಗೊಳಿಸಿದ್ದ ಎರಡು ಬಸ್ಗಳಿಂದ ಡೀಸೆಲ್ ಕಳವು ನಡೆದಿದೆ. ಕುಂಬಳೆ-ಬದಿಯಡ್ಕ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ನ ಮುಂದೆ ನಿಲ್ಲಿಸಿದ್ದ ಗುರುವಾಯೂರಪ್ಪನ್ ಬಸ್ನಿಂದ 150 ಲೀಟರ್ ಹಾಗೂ ಅರಿಯಪ್ಪಾಡಿ ಬಸ್ನಿಂದ 135 ಲೀಟರ್ ಡೀಸೆಲ್ ಕಳವಿಗೀಡಾಗಿದೆ. ಕುಂಬಳೆ-ಮುಳ್ಳೇರಿಯ ರೂಟ್ನಲ್ಲಿ ಸಂಚರಿಸುವ ಈ ಎರಡು ಬಸ್ಗಳನ್ನು ನಿನ್ನೆ ರಾತ್ರಿ ಪೆಟ್ರೋಲ್ ಬಂಕ್ನ ಮುಂದೆ ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಸಿಬ್ಬಂದಿಗಳು ತಲುಪಿದಾಗಲೇ ಡೀಸೆಲ್ ಕಳವಿಗೀಡಾದ ಬಗ್ಗೆ ಅರಿವಿಗೆ ಬಂದಿದೆ. ಈ ಬಗ್ಗೆ ಗುರುವಾಯೂ ರಪ್ಪನ್ ಬಸ್ನ ಕಂಡಕ್ಟರ್ ಅವಿನಾಶ್ ಹಾಗೂ ಅರಿಯಪ್ಪಾಡಿ ಬಸ್ನ ಮಾಲಕ ಅಬ್ದುಲ್ ಸತ್ತಾರ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಪೆಟ್ರೋಲ್ ಬಂಕ್ನ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಾರೊಂದರ ದೃಶ್ಯ ಪತ್ತೆಯಾಗಿದೆ.