ಕುಂಬಳೆಯಲ್ಲಿ ನಿಲ್ಲಿಸಿದ್ದ ಬಸ್‌ಗಳಿಂದ ಡೀಸಲ್ ಕಳವುಗೈದ ಪ್ರಕರಣ: ಇನ್ನೋರ್ವ ಬಂಧನ
ಕುಂಬಳೆ: ಕುಂಬಳೆಯ ಪೆಟ್ರೋ ಲ್ ಬಂಕ್ ಸಮೀಪ ನಿಲ್ಲಿಸಿದ್ದ ಖಾಸಗಿ ಬಸ್‌ಗಳಿಂದ ಡೀಸೆಲ್ ಕಳವುಗೈದ ಪ್ರಕರಣದಲ್ಲಿ ಇನ್ನೋರ್ವನನ್ನು ಬಂಧಿಸಲಾಗಿದೆ. ಕರ್ನಾಟಕದ ಬಂ ಟ್ವಾಳ ನೋಳ ಎಂಬಲ್ಲಿನ ನಜೀರ್ (22) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಬಂಧಿಸಿದ್ದಾರೆ. ಡೀಸೆಲ್ ಕಳವು ಪ್ರಕರಣದಲ್ಲಿ ಆರೋಪಿಯಾಗಿ ದ್ದ ಈತನ ವಿರುದ್ಧ ಕೇಸು ದಾಖಲಿಸಿದ ಹಿನ್ನೆಲೆಯಲ್ಲಿ ಈತ ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ ನ್ಯಾಯಾಲಯವನ್ನು ಸಮೀಪಿಸಿದ್ದನು. ಈ ವೇಳೆ ತನಿಖಾ ಧಿಕಾರಿ ಮುಂದೆ ಹಾಜರಾಗುವಂತೆ ನಜೀರ್‌ಗೆ ನ್ಯಾಯಾಲಯ ನಿರ್ದೇಶಿಸಿತ್ತು. ಅಗೋಸ್ತ್ ೮ರಂದು ರಾತ್ರಿ ಕುಂಬಳೆ ಪೆಟ್ರೋಲ್ ಬಂಕ್‌ನ ಸಮೀಪ ನಿಲ್ಲಿಸಿ ದ್ದ ಎರಡು ಖಾಸಗಿ ಬಸ್‌ಗಳಿಂದ ಒಟ್ಟು 285 ಲೀಟರ್ ಡೀಸೆಲ್ ಕಳವುಗೈಯ್ಯಲಾಗಿತ್ತು. ಈ ಪ್ರಕರಣ ದಲ್ಲಿ ಇನ್ನೋರ್ವ ಆರೋಪಿ ಪುತ್ತಿಗೆ ಕಟ್ಟತ್ತಡ್ಕ ಮುಹಿಮ್ಮಾತ್‌ನಗರದ ಶುಕೂರ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿದೆ.