ಕುಂಬಳೆ ಅಂಗಡಿ ವರಾಂಡದಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ

ಕುಂಬಳೆ: ಸ್ವಂತ ಪುತ್ರ ಮನೆ ಯಿಂದ ಹೊರದಬ್ಬಿದ ಹಿನ್ನೆಲೆಯಲ್ಲಿ ಬೀದಿಯಲ್ಲಿ ರೋಗ ಬಾಧಿತನಾಗಿ ಸಂಕಷ್ಟ ಜೀವನ ಸಾಗಿಸುತ್ತಿದ್ದ ವ್ಯಕ್ತಿಗೆ ತಾತ್ಕಾಲಿಕ ನೆಮ್ಮದಿ ಮೂಡಿದೆ. ಪಾಲಕ್ಕಾಡ್ ನಿವಾಸಿಯೂ ನೇಶ ನಲ್ ಪರ್ಮಿಟ್ ಲಾರಿಯಲ್ಲಿ ದೀರ್ಘಕಾಲ ಚಾಲಕನಾಗಿ ದುಡಿದ ಶರೀಫ್ (೬೨)ರಿಗೆ ಕಾಸರಗೋಡು ಸಿ.ಎಚ್. ಸೆಂಟರ್ ಆಸರೆ ವೊದಗಿಸಿದೆ.

ಉಬ್ಬಿದ ಹೊಟ್ಟೆಯೊಂದಿಗೆ ಕುಂಬಳೆಯ ಅಂಗಡಿ ವರಾಂಡದಲ್ಲಿ  ವಾಸ್ತವ್ಯ ಹೂಡಿ, ಆಹಾರ ಸೇವಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದ ಶರೀಫ್‌ರ ಸಂಕಷ್ಟ ಜೀವನದ ಕುರಿತು ‘ಕಾರವಲ್’ ನಿನ್ನೆ ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ವರದಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ಕುಂಬಳೆ ಪಂಚಾಯತ್ ಸದಸ್ಯ ಯೂಸಫ್ ಉಳುವಾರು, ಇತರ ಪದಾಧಿಕಾರಿಗಳಾದ ಬಿ.ಎನ್. ಮುಹಮ್ಮದಾಲಿ, ನಿಸಾಂ ಚೋನಂಬಾಡಿ, ಜಂಶೀರ್, ಸವಾದ್ ಅಂಗಡಿಮೊಗರು, ಎಂಬವರ ನೇತೃತ್ವದಲ್ಲಿ ಕಾರ್ಯಕರ್ತರು ಕುಂಬಳೆಗೆ ತಲುಪಿ ದ್ದಾರೆ. ದೀರ್ಘ ಹೊತ್ತು ಹುಡುಕಾ ಡಿದ ಬಳಿಕ ಅಂಗಡಿ ವರಾಂಡದಲ್ಲಿ ಮಲಗಿದ್ದ ಶರೀಫ್‌ರನ್ನು ಪತ್ತೆಹಚ್ಚಲಾ ಯಿತು. ಕೂಡಲೇ ಅವರನ್ನು ಮುಸ್ಲಿಂ ಲೀಗ್  ಪಂಚಾಯತ್ ಸಮಿತಿ ಕಚೇರಿಗೆ ತಲುಪಿಸಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಲಾಯಿತು.

ಈ ಮಧ್ಯೆ ಕುಂಬಳೆ ಪೊಲೀಸ್  ಇನ್ಸ್‌ಪೆಕ್ಟರ್ ಇ. ಅನೂಪ್ ಕುಮಾರ್ ಕೂಡಾ ಅಲ್ಲಿಗೆ ತಲುಪಿ ದರು. ಆಸ್ಪತ್ರೆಗೆ ದಾಖಲಿಸಲಿರುವ ಅಧಿಕೃತ ಕ್ರಮಗಳನ್ನು ಕೈಗೊಳ್ಳಲಾ ಯಿತು. ಅನಂತರ ಲೀಗ್ ಕಾರ್ಯಕರ್ತರೇ ಕಾರಿಗೆ ಹತ್ತಿಸಿ ಅವರನ್ನು ಕಾಸರಗೋಡು ತಳಂಗರೆ ಮಾಲಿಕ್ ದೀನಾರ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದರು. ಆಸ್ಪತ್ರೆಯಲ್ಲಿ ವೈಟ್ ಗಾರ್ಡ್ ಕಾರ್ಯಕರ್ತರಾದ ಇಬ್ಬರು ಅವರ ಶುಶ್ರೂಷೆಗಿದ್ದಾರೆ.

ಈ ಮಧ್ಯೆ ಶರೀಫ್‌ರ ಕುಟುಂಬಸ್ಥರನ್ನು ಭೇಟಿಯಾಗಲು ಶಾಸಕ ಎ.ಕೆ.ಎಂ. ಅಶ್ರಫ್ ಪಾಲಕ್ಕಾಡ್ ಶಾಸಕ ಶಾಫಿ ಪರಂಬಿಲ್‌ರನ್ನು ಸಂಪರ್ಕಿಸಿದ್ದಾರೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಲಭಿಸಿದ ಶರೀಫ್ ಆರೋಗ್ಯವಂತನಾಗುತ್ತಿದ್ದಾರೆ.

You cannot copy contents of this page