ಕುಂಬಳೆ ಉಪಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ
ಬದಿಯಡ್ಕ : ಕ್ರೀಡೆ, ಆಟೋಟ ಗಳು ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಉತ್ತಮಪಡಿಸಲು ಪೂರಕ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿ ಕರುಣಾಕರ ಅಭಿಪ್ರಾಯ ಪಟ್ಟರು. ಬದಿಯಡ್ಕ ಬೋಳುಕಟ್ಟೆ ಕ್ರೀಡಾಂಗ ಣದಲ್ಲಿ ಕುಂಬಳೆ ಉಪ ಜಿಲ್ಲಾ ಕ್ರೀಡಾಕೂಟದ ಧ್ವಜಾ ರೋಹಣ ನೆರವೇರಿಸಿ ಅವರು ಮಾತನಾಡಿ ದರು. ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾ ಕಾರ್ಯ ದರ್ಶಿ ಶಶಿಕಾಂತ್, ಮುಖ್ಯ ಶಿಕ್ಷಕ ಸಂಘದ ವಿಷ್ಣು ಪಾಲ್, ಪಂಚಾ ಯತ್ ಶಿಕ್ಷಣ ಸಮಿತಿಯ ಸುಬ್ರಹ್ಮಣ್ಯ ಭಟ್, ಪೆರಡಾಲ ಸರಕಾರಿ ಪ್ರೌಢಶಾಲೆಯ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ, ಶಿಕ್ಷಕ ಸಂಘದ ಕಾರ್ಯ ದರ್ಶಿ ರಿಶಾದ್ ಉಪಸ್ಥಿತರಿದ್ದರು. ನಾಲ್ಕು ದಿನಗಳಲ್ಲಾ ಗಿ ನಡೆಯುವ ಕಾರ್ಯಕ್ರಮದಲ್ಲಿ ಉಪಜಿಲ್ಲೆಯ ಶಾಲೆಗಳ ನೂರಾರು ಮಕ್ಕಳು ಭಾಗವಹಿಸುವರು.