ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಸಮಾರೋಪ

ಕುಂಬಳೆ: ನಾಲ್ಕು ದಿನಗಳಿಂದ ಬದಿಯಡ್ಕದ ಬೋಳುಕಟ್ಟೆ ಮೈದಾನದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕ್ರೀಡಾಕೂಟ ಸಮಾಪ್ತಿಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್ ಅಧ್ಯಕ್ಷತೆವಹಿಸಿದರು. ಬದಿಯಡ್ಕ ಸರ್ಕಲ್ ಇನ್ಸ್ಪೆಕ್ಟರ್ ವಿನೇಶ್ ವಿ.ಆರ್. ವಿಜೇತ ತಂಡ ಗಳಿಗೆ ಟ್ರೋಫಿಗಳನ್ನು ವಿತರಿಸಿದರು . ಬದಿಯಡ್ಕ ಸಬ್ ಇನ್ಸ್ಪÉಕ್ಟರ್ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ, ಉಪಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶಶಿಕಾಂತ, ಪೆರಡಾಲ ಸರಕಾರಿ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ ಉಪಾಧ್ಯಕ್ಷ ರಾಮ ಉಪಸ್ಥಿತರಿದ್ದರು ಶಾಲೆಯ ಹಿರಿಯ ಶಿಕ್ಷಕಿ ಬೀನಾ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ರಿಷಾದ್ ಪಿ. ಎಂ. ಎ. ವಂದಿಸಿದರು. ಕ್ರೀಡಾಕೂಟದಲ್ಲಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಚಾಂಪಿಯನ್ ಪಟ್ಟ ಗಳಿಸಿತು. ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ ರನ್ನರ್ ಆಫ್, ಸರಕಾರಿ ವೆÀÇಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಮುಳ್ಳೇರಿಯ ತೃತೀಯ ಸ್ಥಾನವನ್ನ ಗಳಿಸಿತು.ಈ ಸಂದರ್ಭದಲ್ಲಿ ಈ ಶಾಲಾ ವರ್ಷ ಪೆರಡಾಲ ಸರಕಾರಿ ಪ್ರೌಢಶಾಲೆಯಿಂದ ನಿವೃತ್ತರಾಗಲಿರುವ ದೈಹಿಕ ಶಿಕ್ಷಕ ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

You cannot copy contents of this page