ಕುಂಬಳೆ ಬೆಡಿ ಉತ್ಸವ: ಕ್ಷೇತ್ರ- ಉತ್ಸವ ಸಮಿತಿ ಪದಾಧಿಕಾರಿಗಳ ವಿರುದ್ಧ ಕೇಸು
ಕುಂಬಳೆ: ಕುಂಬಳೆ ಶ್ರೀ ಗೋಪಾಸಕೃಷ್ಣ ಕ್ಷೇತ್ರದ ಪ್ರಸಿದ್ಧ ಬೆಡಿ ಉತ್ಸವದಂಗವಾಗಿ ಪಟಾಕಿಗಳನ್ನು ಸಿಡಿಸಿದ ಘಟನೆಯಲ್ಲಿ ಕ್ಷೇತ್ರ ಉತ್ಸವ ಸಮಿತಿ ಪದಾಧಿಕಾರಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು. ಕೆ. ಸದಾನಂದ ಕಾಮತ್, ಎಸ್. ಸದಾನಂದ ಕಾಮತ್, ಮಧುಸೂದನ ಕಾಮತ್, ಲಕ್ಷ್ಮಣ ಪ್ರಭು, ಸುಧಾಕರ ಕಾಮತ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿರುವುದು.
ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಘಟನೆ ನಡೆದಿದೆ. ಜಿಲ್ಲಾ ಫಾರೆನ್ಸಿಕ್ ಸಯನ್ಸ್ ಲ್ಯಾಬೋರೇಟರಿಯ ಪಶ್ಚಿಮ ಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಅಪಾಯ ಉಂಟಾಗಬಹುದಾದ ಸಾಧ್ಯತೆಯ ರೀತಿಯಲ್ಲಿ ಪಟಾಕಿ ಸಿಡಿಸಿರುವುದಾಗಿ ಆರೋಪಿಸಿ ಪೊಲೀ ಸರು ಕೇಸು ದಾಖಲಿಸಿದ್ದಾರೆ. ಉತ್ಸವದಂಗವಾಗಿ ಪಟಾಕಿ ಸಿಡಿಸಿದ ಘಟನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೋಂದಾಯಿಸಿದ ಎರಡನೇ ಪ್ರಕರಣವಾಗಿದೆ ಇದು. ಕುಂಡಂಗಳಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಉತ್ಸವದಂಗವಾಗಿ ಪಾಂಡಿಕಂಡದಲ್ಲಿ ಪಟಾಕಿ ಸಿಡಿಸಿರುವುದಕ್ಕೆ ಆದೂರು ಪೊಲೀಸರು ಕೇಸು ದಾಖಲಿಸಿದ್ದರು.