ಕುಂಬಳೆ: ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ಮಳೆ ನೀರು; ಸಾರಿಗೆ ಅಡಚಣೆ
ಕುಂಬಳೆ: ಕುಂಬಳೆ ಕೊಯಿಪ್ಪಾಡಿ ರಸ್ತೆಯಲ್ಲಿರುವ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ಇಂದು ಬೆಳಿಗ್ಗೆ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಯಾಯಿತು. ಶಾಲಾ ವಾಹನಗಳಿಗೂ ಸಂಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವು ಮಕ್ಕಳು ಶಾಲೆಗೆ ತಲುಪಲು ಸಾಧ್ಯ ವಾಗಲಿಲ್ಲ. ಕೊಯಿಪ್ಪಾಡಿಯ ಯುವಕರು ತಲುಪಿ ನೀರು ತೆರವುಗೊ ಳಿಸುವ ಕಾರ್ಯ ಆರಂಭಿಸಿದ್ದಾರೆ. ಪ್ರತೀ ವರ್ಷ ಇಲ್ಲಿ ನೀರು ತುಂಬಿಕೊಳ್ಳುತ್ತಿದ್ದರೂ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಸಿದ್ಧರಾಗಲಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.