ಕುಂಬೋಳ್ ಮಖಾಂ ಉರೂಸ್ 16ರಿಂದ
ಕುಂಬಳೆ: ಕುಂಬೋಳ್ ಮುಸ್ಲಿಂ ವಲಿಯ ಜಮಾಯತ್ ಮಸೀದಿಯಲ್ಲಿ ಸಯ್ಯಿದ್ ಅರಬಿ ವಲಿಯುಲ್ಲಾಹಿ ಅವರ ಹೆಸರಲ್ಲಿ ಐದು ವರ್ಷಕ್ಕೊಮ್ಮೆ ನಡೆಸುವ ಕುಂಬೋಳ್ ಮಖಾಂ ಉರೂಸ್ ಈ ತಿಂಗಳ 16ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಂಡಿತರು, ಸಾದಾತುಗಳು, ಪ್ರವಚನಕಾರರು, ರಾಜಕೀಯ ಸಾಂಸ್ಕೃತಿಕ ವಲಯದ ಖ್ಯಾತರು ಭಾಗವಹಿಸುವರು ಎಂದು ಈ ಬಗ್ಗೆ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉರೂಸ್‌ನ ಅಂಗವಾಗಿ ಉಚಿತ ಮೆಡಿಕಲ್ ಕ್ಯಾಂಪ್, ಆರೋಗ್ಯ ತಿಳುವಳಿಕಾ ತರಗತಿ, ಮಹಲ್ ಪ್ರತಿನಿಧಿ ಸಂಗಮ, ವಿದ್ಯಾರ್ಥಿ ಯುವಜನಸಂಗಮ, ಮಹಿಳಾ ಸಂಗಮ, ವಿಚಾರಗೋಷ್ಠಿ, ಕುಂಬೋಳ್ ಉಸ್ತಾದ್ ಪಿ.ಎ. ಅಹಮ್ಮದ್ ಮುಸ್ಲಿಯಾರ್ ಸಂಸ್ಮರಣೆ, ಪೂರ್ವ ವಿದ್ಯಾರ್ಥಿ ಸಂಗಮ, ಬುರ್ದಾ ಪಾರಾಯಣ ಸ್ಪರ್ಧೆ, ಪ್ರವಾಸಿ ಸಂಗಮ, ಹಿಫ್ಳ್ ಸನದುದಾನ ಮೊದ ಲಾದ ಕಾರ್ಯಕ್ರಮಗಳು ನಡೆಯಲಿದೆ.
16ರಂದು ಬೆಳಿಗ್ಗೆ 10 ಗಂಟೆಗೆ ಮಖಾಂ ಸಿಯಾರತ್‌ಗೆ ಅತಾವುಳ್ಳ ತಂಙಳ್ ಉದ್ಯಾವರ ನೇತೃತ್ವ ನೀಡುವರು. ಎಂ. ಅಬ್ಬಾಸ್ ಧ್ವಜಾರೋಹಣ ಗೈಯ್ಯುವರು. ರಾತ್ರಿ 8 ಗಂಟೆಗೆ ಪಾಣಕ್ಕಾಡ್ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಪ್ರಾರ್ಥನೆ ನಡೆಸುವರು. ವಿವಿಧ ದಿನಗಳಲ್ಲಿ ಹಲವು ಪಂಡಿತರು ಮತ ಪ್ರವಚನ ನಡೆಸುವರು. ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಜಮಾಯತ್ ಅಧ್ಯಕ್ಷ ಪಿ.ಕೆ. ಮುಸ್ತಫ ಹಾಜಿ, ಪ್ರಧಾನ ಕಾರ್ಯದರ್ಶಿ ಎ. ಮುಹಮ್ಮದ್ ಕುಂಞಿ, ಕೋಶಾಧಿಕಾರಿ ಹುಸೈನ್ ದರ್ವೇಷ್, ಉರೂಸ್ ಸಮಿತಿ ಅಧ್ಯಕ್ಷ ಎಂ. ಅಬ್ಬಾಸ್, ಕೆ.ಪಿ. ಶಾಹುಲ್ ಹಮೀದ್ ಸಹಿತ ಹಲವರು ಭಾಗವಹಿಸಿದರು.