ಕುಂಬ್ಡಾಜೆ ಪಂ.ಬಿಜೆಪಿ ಸದಸ್ಯ ನಿಧನ
ಕುಂಬ್ಡಾಜೆ: ಪಂಚಾ ಯತ್‌ನ ೯ನೇ ವಾರ್ಡ್ ಸದಸ್ಯ, ಈ ಹಿಂದೆ ಬ್ಲೋಕ್ ಪಂಚಾಯತ್ ಸದಸ್ಯನಾಗಿದ್ದ ಬಿಜೆಪಿ ಮುಖಂಡ ಸುಂದರ ಮವ್ವಾರ್ (74) ನಿಧನ ಹೊಂದಿದರು. ಹೃದಯ ಸಂಬಂಧವಾದ ಅಸೌಖ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಅವರು ನಿಧನ ಹೊಂದಿದರು. ಮೃತರು ಪತ್ನಿ ಕಮಲ, ಮಕ್ಕಳಾದ ಉಮಾವತಿ, ರತ್ನಾವತಿ, ಉದಯ, ಮಮತ, ನಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.