ಕುಟುಂಬಶ್ರೀಯ  ರಾಜ್ಯ ಮಟ್ಟದ ‘ಸರ್ಗೋತ್ಸವಂ 2024’ ಕಲೋತ್ಸವಕ್ಕೆ ನಾಳೆ ಚಾಲನೆ

ಕಾಸರಗೋಡು: ಕುಟುಂಬಶ್ರೀ ಯ ರಾಜ್ಯ ಮಟ್ಟದ ಸರ್ಗೋತ್ಸವ ಆರಂಙ 2024 (ಪ್ರತಿಭಾ ಸಾಮರ್ಥ್ಯಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವಿಕೆ) ಕಾರ್ಯಕ್ರಮ ನಾಳೆ ಪಿಲಿಕ್ಕೋಡಿನಲ್ಲಿ ಚಾಲನೆ ದೊರಕಲಿದೆ.

ಪಿಲಿಕ್ಕೋಡು ಗ್ರಾಮ ಪಂಚಾಯತ್‌ನ 14 ವೇದಿಕೆಗಳಲ್ಲಾಗಿ ಈ ಕಲೋತ್ಸವಗಳು ನಡೆಯಲಿದೆ. ಮೂರುದಿನಗಳ ತನಕ ಇದು ಮುಂದುವರಿಯಲಿದೆ. ಪಿಲಿಕ್ಕೋಡ್ ಗ್ರಾಮ ಪಂಚಾಯತ್‌ನ ಮೈದಾನದಲ್ಲಿ ವಿಶೇಷವಾಗಿ ಸಜ್ಜೀಕರಿಸಲಾಗಿರುವ ಪ್ರಧಾನ ವೇದಿಕೆಯಲ್ಲಿ ನಾಳೆ ಸಂಜೆ 4 ಗಂಟೆಗೆ ನಡೆಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಕಲೋತ್ಸವವನ್ನು ವಿಧಾನಸಭಾ ಅಧ್ಯಕ್ಷ ಎ.ಎನ್. ಶಂಶೀರ್ ಉದ್ಘಾಟಿಸುವರು.  ಕುಟುಂಬಶ್ರೀ ನೆರೆಕರೆ ಕೂಟಗಳಿಗೆ 46, ಅಕ್ಸಿಲರಿ ಸದಸ್ಯರಿಗೆ ಮತ್ತು ಸಾರ್ವಜನಿಕ ವಿಭಾಗದಲ್ಲಿ 46  ಮೂರು ಸ್ಪರ್ಧೆಗಳು ಈ ಕಾರ್ಯಕ್ರಮದಂಗವಾಗಿ ನಡೆಯಲಿದೆ.  ರಾಜ್ಯದಾದ್ಯಂ ತವಾಗಿ ಆಗಮಿಸುವ ಒಟ್ಟು 3500 ಈ ಸ್ಪರ್ಧೆಗಳಲ್ಲಿ ಭಾಗವಹಿಸುವರು. ರಾಜ್ಯ ಅಬಕಾರಿ ಸ್ಥಳೀಯಾಡಳಿತ ಖಾತೆ ಸಚಿವ ಎಂ.ವಿ. ರಾಜೇಶ್  ಅರು ಸಮಾರೋಪ ಸಮಾರಂಭವನ್ನು ಉದ್ಘಾಟಿ ಸುವರೆಂದು  ಇದಕ್ಕೆ ಸಂಬಂಧಿಸಿ  ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಂ. ರಾಜಗೋಪಾಲ್,  ಪ್ರೋಗ್ರಾಂ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮತ್ತು ಸಂಬಂಧಪಟ್ಟ ಇತರರು ತಿಳಿಸಿದ್ದಾರೆ.

You cannot copy contents of this page