ಕುಡಿಯುವ ನೀರು ರೋಗುಣುಮುಕ್ತವೆಂದು ಖಚಿತಪಡಿಸಲು ಶಾಲೆಗಳಲ್ಲಿ ಕ್ರಮ
ಹೊಸದುರ್ಗ: ಮಕ್ಕಳಿಗೆ ನೀಡುವ ಕುಡಿಯುವ ನೀರು ರೋಗಾಣುಮುಕ್ತವಾಗಿರುವುದಾಗಿ ಖಚಿತಪಡಿಸಲು ಕಯ್ಯೂರು- ಚೀಮೇನಿ ಪಂಚಾಯತ್ ಹಾಗೂ ಕುಟುಂಬಾರೋಗ್ಯ ಕೇಂದ್ರದ ನೇತೃತ್ವದಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು ಪರಿಶೀಲನೆ ಆರಂಭಿಸಲಾ ಯಿತು. ಜಲ ಸುರಕ್ಷೆಯ ಮೂಲಕ ಕಯ್ಯೂರು ಕುಟುಂಬಾರೋಗ್ಯ ಕೇಂದ್ರದ ನೇತೃತ್ವದಲ್ಲಿ ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. ಪ್ರಸ್ತುತ ಪರಿಶೀಲನೆಯಲ್ಲಿ ಬ್ಯಾಕ್ಟೀರಿಯ ಕಂಡು ಬಂದ ಆರು ಶಾಲೆಗಳಲ್ಲಿ ಪಂಚಾಯತ್ ವಾಟರ್ ಫಿಲ್ಟರ್ ಸ್ಥಾಪಿಸಿದೆ.
ಫಿಲ್ಟರ್‌ನ ಮುಂದಿನ ತಪಾಸಣೆಗಳಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಗಳಿಗೆ ತಲುಪಿ ಮತ್ತೆ ಸ್ಯಾಂಪಲ್ ಸಂಗ್ರಹ ನಡೆಸುವರು. ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಎ.ವಿ. ಶ್ರೀಜಿತ್ ಪರಿಶೀಲನೆಗೆ ನೇತೃತ್ವ ನೀಡಿದರು.