ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅನಾಹುತ: ಸಾವಿನ ಸಂಖ್ಯೆ 46ಕ್ಕೇರಿಕೆ : ಮಡಿದವರಲ್ಲಿ ಕಾಸರಗೋಡಿನ ಇಬ್ಬರು ಸೇರಿ 14 ಮಂದಿ ಕೇರಳೀಯರು

ಕುವೈತ್: ಕುವೈತ್‌ನಲ್ಲಿ 195 ಭಾರತೀಯ ಕಾರ್ಮಿಕರು ವಾಸಿಸುತ್ತಿ ರುವ ಬಹುಮಹಡಿ ಕಟ್ಟಡದಲ್ಲಿ ಉಂಟಾದ ಬೆಂಕಿ ಅನಾಹುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 46ಕ್ಕೇರಿದೆ. ಇದರಲ್ಲಿ  ಕಾಸರಗೋ ಡಿನ ಇಬ್ಬರು ಸೇರಿದಂತೆ 14 ಮಂದಿ ಕೇರಳೀಯರು ಒಳಗೊಂಡಿದ್ದಾರೆ.

ಈ ಬೆಂಕಿ ಅನಾಹುತದಲ್ಲಿ ೫೦ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ ಸುಟ್ಟು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಲ್ಲಾಗಿ ದಾಖಲಿ ಸಲಾಗಿದೆ. ಇವರಲ್ಲಿ ಹಲವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀg ವಾಗಿದ್ದು, ಇದರಿಂದಾಗಿ  ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಕಳವಳ ಉಂಟಾಗಿದೆ.

ಕುವೈತ್‌ನ ದಕ್ಷಿಣ ಮಂಗಾಫ್ ಜಿಲ್ಲೆಯ ಬಹುಮಹಡಿ ಕಟ್ಟಡದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಕೊಚ್ಚಿಯ ಉದ್ಯಮಿ ಕೆ.ಜಿ. ಅಬ್ರಹಾಂ ಎಂಬವರ ಮಾಲಕತ್ವದಲ್ಲಿರುವ ಕಟ್ಟಡ ಇದಾ ಗಿದೆ. ಇದರಲ್ಲಿ ಕೇರಳ ಮತ್ತು ತಮಿಳುನಾಡಿನ 195 ಕಾರ್ಮಿಕರು ವಾಸವಾಗಿದ್ದಾರೆ.  ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಕಾಸರಗೋಡು ಚೆರ್ಕಳ ಕುಂಡಡ್ಕದ ರವೀಂದ್ರನ್-ರಮಣಿ ದಂಪತಿ ಪುತ್ರ ಕೆ. ರಂಜಿತ್ (34) ಮತ್ತು  ಚೆರ್ವತ್ತೂರು ಪಿಲಿಕ್ಕೋಡ್ ಎರವಿಲ್ ನಿವಾಸಿ  ಹಾಗೂ ಈಗ ತೃಕ್ಕರಿಪುರ ಇಳಂಬಚ್ಚಿಯಲ್ಲಿ ವಾಸಿಸುತ್ತಿರುವ ಪಿ. ಕುಂಞಿಕೇಳು (58) ಎಂಬವರು ಒಳಗೊಂಡಿದ್ದಾರೆ.  

ಅವಿವಾಹಿತರಾಗಿರುವ ರಂಜಿತ್ ಕಳೆದ 10 ವರ್ಷಗಳಿಂದ ಕುವೈತ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಊರಲ್ಲಿರುವ ತಮ್ಮ ಹೊಸ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಇವರು ಇತ್ತೀಚೆಗೆ ಊರಿಗೆ ಬಂದು ಹಿಂತಿರುಗಿದ್ದರು.

ಮೃತರು ಸಹೋದರ ರಜೀಶ್ (ಗಲ್ಫ್), ಸಹೋದರಿ ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಞಿಕೇಳು ಅವರು ಕಳೆದ ೨೫ ವರ್ಷಗಳಿಂದ  ಕುವೈತ್‌ನಲ್ಲಿ ದುಡಿಯುತ್ತಿದ್ದಾರೆ. ದಿ| ಕುಂಞಿ ಪುರಯಿಲ್ ಕೇಳು ಅಡಿಯೋಡಿ-ಪಾರ್ವತಿ ದಂಪತಿ ಪುತ್ರನಾಗಿರುವ ಕುಂಞಿಕೇಳು ಪತ್ನಿ ಕೆ.ಎನ್, ರಮಣಿ ( ಪಿಲಿಕೋಡ್ ಗ್ರಾಮ ಪಂಚಾಯತ್ ಕ್ಲಾರ್ಕ್), ಮಕ್ಕಳಾದ ಹೃಷಿಕೇಶ್, ದೇವ್‌ಕಿರಣ್, ಸಹೋದರ-ಸಹೋದರಿಯರಾದ ಕೃಷ್ಣನ್, ಲಕ್ಷ್ಮಿ, ಭವಾನಿ, ರಾಧಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಈ ಬೆಂಕಿ ಅನಾಹುತದಲ್ಲಿ ಕೇರಳದ ಕೊಲ್ಲಂ ಗುರುನಾಟ್ ಶಮೀರ್ ಉಮರುದ್ದೀನ್ (30), ಕೋಟ್ಟಯಂ ಪಾಂಬಾಡಿಯ ಸ್ಟೆಫಿನ್ ಎಬ್ರಹಾಂ ಸಾಬು (29), ಪತ್ತನಂತಿಟ್ಟ ಪಂದಳಂನ ಶಶಿಧರನ್ ನಾಯರ್ (31), ಕೊಲ್ಲಂ ಪುನಲೂರಿನ ಸಾಜನ್ ಜೋರ್ಜ್ (29), ಪತ್ತನಂತಿಟ್ಟ ಕೋಣಿಯ ಸಜು ವರ್ಗೀಸ್ (56), ವಳ್ಳಿಕ್ಕೋಡ್ ಎಳಮುಟ್ಟದ ಪಿ.ವಿ. ಮುರಳೀಧರನ್  (68), ಕೊಲ್ಲಂ ವೆಳ್ಳಿಚ್ಚಾಲ್‌ನ ಲೂಕೋಸ್ (ಸಾಬು 48) ಮತ್ತು ತಿರುವಲ್ಲಾದ ಮೇಪ್ರಾನ್ ಥೋಮಸ್ ಉಮ್ಮನ್ (37) ಎಂಬವರು ಸಾವನ್ನಪ್ಪಿದವರಲ್ಲಿ ಒಳಗೊಂಡಿರುವ   ಕೇರಳೀಯರಾಗಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದ ಹಲವರ ಗುರುತು ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಅಂತಹ ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಸಲಾಗುವುದೆಂದು ಕುವೈತ್‌ನ ಉಪಪ್ರಧಾನಿ ತಿಳಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲುಗೊಂಡಿವರಿಗೆ  ಅಗತ್ಯದ ಎಲ್ಲಾ ನೆರವು ನೀಡಲಾಗುವುದೆಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಊರಿನಲ್ಲಿರು ವ ಅವರ ಸಂಬಂಧಿಕರಿಗೆ ಸಂಪರ್ಕಿ ಸಲು ತುರ್ತು ಸಹಾಯವಾಣಿ ಸೇವೆಯನ್ನು ಏರ್ಪಡಿಸಲಾಗಿದೆ. ಕಾರ್ಮಿಕರು  ದುರಂತ ನಡೆದ ಕಟ್ಟಡ ಮಾಲಕನನ್ನು ಬಂಧಿಸುವಂತೆ ಆದೇಶ ನೀಡಲಾಗಿದೆಯೆಂದು ಕುವೈತ್‌ನ ಆಂತರಿಕ ಸಚಿವರು ಆದೇಶ ನೀಡಿದ್ದಾರೆ. ಮಡಿದವರ ಮೃತದೇಹಗಳನ್ನು ಊರಿಗೆ ತಲುಪಿಸಲು ಅಗತ್ಯದ ಎಲ್ಲಾ ಕ್ರಮ ಗಳನ್ನು ಆರಂಭಿಸಲಾಗಿದೆಯೆಂದು ಭಾರತೀಯ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page