ಕೂಡ್ಲುನಲ್ಲಿ ಮನೆಯಿಂದ ನಗ-ನಗದು ಕಳವು

ಕಾಸರಗೋಡು: ಕೂಡ್ಲು ಶಾಸ್ತಾನಗರದಲ್ಲಿ ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವು ನಡೆದ ಬಗ್ಗೆ ದೂರಲಾಗಿದೆ.

ಶಾಸ್ತಾನಗರದ ಇಲ್ಯಾಸ್ ಮಂಜಿಲ್‌ನ ನಬೀಸ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಆದಿತ್ಯವಾರ ಸಂಜೆ 6 ಗಂಟೆಯಿಂದ ಸೋಮವಾರ ಸಂಜೆ 5.30೦ರ ಮಧ್ಯೆ ಕಳವು ನಡೆದಿದೆ. ಮನೆಯ ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಕಳ್ಳರು  ಒಳಗೆ ನುಗ್ಗಿದ್ದಾರೆ. ಬೆಡ್‌ರೂಂ ಕಪಾಟಿನ ಬೀಗ ಮುರಿದು ಒಂದು ಪವನ್ ಚಿನ್ನಾಭರಣ ಹಾಗೂ 22,000 ರೂಪಾಯಿ ಕಳವು ನಡೆಸಲಾಗಿದೆಯೆಂದು ದೂರಲಾಗಿದೆ.

RELATED NEWS

You cannot copy contents of this page