ಕೂಲಿ ಕಾರ್ಮಿಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಕಾರಡ್ಕ ಕರ್ಮಂತೋಡಿ ಬಳಿಯ ಕುಂಡಡ್ಕ ನಿವಾಸಿ ಕೂಲಿ ಕಾರ್ಮಿಕ ಕೇಶವನ್ ಕೆ (55) ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದು ಹಿಂತಿರುಗಿದ ಬಳಿಕ ನಾಪತ್ತೆಯಾಗಿದ್ದರು. ಹುಡುಕಾಡುತ್ತಿದ್ದ ಮಧ್ಯೆ ಮನೆ ಸಮೀಪದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಂದೆ ತಾಣ ಈ ಹಿಂದೆ ನಿಧನರಾಗಿದ್ದಾರೆ. ಮೃತರು ತಾಯಿ ಸುಂದರಿ, ಸಹೋದರಿ ಸುಶೀಲಾ, ಸಹೋದರ ಗಣೇಶ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಮೊದಲ ಪತ್ನಿ ಸರೋಜಿನಿ ಸಂಬಂಧ ಕಡಿದುಕೊಂಡಿದ್ದು, ಆ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ. ಬಳಿಕ ಸರೋಜಿನಿ ಎಂಬವರನ್ನು ವಿವಾಹವಾಗಿದ್ದು, ಆಕೆ ಈ ಹಿಂದೆ ನಿಧನಹೊಂದಿದ್ದಾರೆ.