ಕೃಷಿಕ ಅಸೌಖ್ಯ ಬಾಧಿಸಿ ನಿಧನ
ನೀರ್ಚಾಲು: ಮಾಡತ್ತಡ್ಕ ಚೋಯಿ ಮೂಲೆ ನಿವಾಸಿ ಬಾಲಕೃಷ್ಣ ಎಂ. (52) ನಿಧನ ಹೊಂದಿದರು. ಕಿಡ್ನಿ ಅಸೌಖ್ಯ ಬಾಧಿಸಿದ್ದ ಇವರು ಕಳೆದ ಎರಡು ವಾರಗಳಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಕೃಷಿಕನಾಗಿದ್ದ ಬಾಲಕೃಷ್ಣ ಡಿವೈಎಫ್‌ಐ, ಸಿಪಿಎಂ ಕಾರ್ಯ ಕರ್ತನಾಗಿದ್ದರು. ದಿ| ಸೀತ ಮೂಲ್ಯ- ಕಮಲ ದಂಪತಿ ಪುತ್ರನಾದ ಮೃತರು ಪತ್ನಿ ಸುಜಾತ, ಸಹೋದರ- ಸಹೋದರಿಯರಾದ ನಾರಾಯಣ, ಮದನ ಎಂ. (ಸಿಪಿಎಂ ನೀರ್ಚಾಲು ಲೋಕಲ್ ಕಮಿಟಿ ಸದಸ್ಯ), ಶಂಕರ ಎಂ. (ಸಿಪಿಎಂ ಮಾಡತ್ತಡ್ಕ ಬ್ರಾಂಚ್ ಸೆಕ್ರೆಟರಿ), ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸರೋಜಿನಿ ಈ ಹಿಂದೆ ನಿಧನ ಹೊಂದಿದ್ದಾರೆ.