ಕೆಎಂಸಿಸಿ ಸಹಾಯಧನ ಹಸ್ತಾಂತರ
ವರ್ಕಾಡಿ: ಇಂಡ್ಯನ್ ಯೂನಿಯನ್ ಮುಸ್ಲಿಂ ಲೀಗ್ ಮೂಲಕ ಕೆಎಂಸಿಸಿ ರಿಯಾದ್ ಸಮಿತಿ ವರ್ಕಾಡಿ ಪಂಚಾಯತ್‌ನ ಐದನೇ ವಾರ್ಡ್ ಉರ್ಣಿ ಎಂಬಲ್ಲಿನ ಬಡ ಕುಟುಂಬಕ್ಕೆ ವಿವಾಹ ಧನಸಹಾಯವನ್ನು ವರ್ಕಾಡಿ ಪಂ. ಮುಸ್ಲಿಂ ಲೀಗ್ ಅಧ್ಯಕ್ಷ ಕೆ. ಮುಹಮ್ಮದ್‌ರಿಗೆ ಕೆಎಂಸಿಸಿ ಮುಖಂಡರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಶ್ರಫ್ ಮೀಪಿರಿ, ಕುಂಞಿ ಉಪ್ಪಳ, ಮಜೀದ್, ಅಬ್ದುಲ್ಲ ಮಾದೇರಿ, ಅಬ್ದುಲ್ ಮಜೀದ್ ಬಿ.ಎ., ಮೊಹಮ್ಮದ್ ಧರ್ಮನಗರ, ಇಬ್ರಾಹಿಂ ಧರ್ಮನಗರ, ಇಬ್ರಾಹಿಂ ಕಜೆ, ಸಲೀಂ ಧರ್ಮನಗರ ಉಪಸ್ಥಿತರಿದ್ದರು.