ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕನಿಗೆ ದೌರ್ಜನ್ಯ ನಿರ್ವಾಹಕ ಕುತ್ತಿಕ್ಕೋಲ್ ನಿವಾಸಿ ಸೆರೆ
ಕಾಸರಗೋಡು: ತಾಯಿಯ ಜೊತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯೆ 15ರ ಹರೆಯದ ಬಾಲಕನಿಗೆ ದೌರ್ಜನ್ಯಗೈದ ಪ್ರಕರಣದಲ್ಲಿ ಆರೋಪಿ ಸೆರೆಯಾಗಿದ್ದಾನೆ. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಕುತ್ತಿಕ್ಕೋಲ್ ಪಯ್ಯಂಗಾನಂ ನಿವಾಸಿ ಪಿ. ರಾಜ (42)ನನ್ನು ನೀಲೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.
ಕಳೆದ ವರ್ಷ ಮೇ 10ರಂದು ಘಟನೆ ನಡೆದಿತ್ತು. ಬಾಲಕ ಹಾಗೂ ತಾಯಿ ನೀಲೇಶ್ವರ ಬಸ್ ನಿಲ್ದಾಣದಿಂದ ಕಣ್ಣೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗೆ ಹತ್ತಿದ್ದರು. ತಾಯಿ ಇನ್ನೊಂದು ಸೀಟಿನಲ್ಲಿ ಕುಳಿತಿದ್ದರು. ಬಾಲಕ ಕುಳಿತ ಸೀಟಿನ ಬಳಿ ತಲುಪಿ ನಿರ್ವಾಹಕ ದೌರ್ಜನ್ಯಗೈದಿರುವುದಾಗಿ ಹೇಳಲಾಗಿತ್ತು. ಕೌನ್ಸಿಲಿಂಗ್‌ನಲ್ಲಿ ದೌರ್ಜನ್ಯದ ಬಗ್ಗೆ ತಿಳಿದುಬಂದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.