ಕೆಎಸ್ಟಿಎ ಮಂಜೇಶ್ವರ ಘಟಕ ಸಮಾವೇಶ
ಮಂಜೇಶ್ವರ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂ ಜೇಶ್ವರ ಯೂನಿಟ್ ಸಮÁವೇಶ ನಿನ್ನೆ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬದಿಯಡ್ಕ ಉದ್ಘಾಟಿಸಿದರು. ತಾಲೂಕು ಕಾರ್ಯ ದರ್ಶಿ ಸತೀಶ್ ಆಚಾರ್ಯ ಉಪ್ಪಳ, ಖಜಾಂಜಿ ವಿಜಯ ದೇವದಾಸ್ ತೂಮಿನಾಡು ಜೊತೆ ಕಾರ್ಯದರ್ಶಿ ಪ್ರೇಮಲತಾ ಉದ್ಯಾವರ ವರದಿ ವಾಚನ ಮಾಡಿದರು. ಯೂನಿಟ್ ಖಜಾಂಚಿ ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಮಾಜಿ ಯೂನಿಟ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಕುತ್ತನಾಡಿ ದಂಪತಿಗಳನ್ನು ಗೌರವಿಸಲÁಯಿತು ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರಾದ ಕೃಷ್ಣ ಕೆದುಂಬಾಡಿ, ಗೀತಾ ಮಂಜೇಶ್ವರ, ಕಲಾವತಿ ಹೊಸಂಗಡಿ, ಸುಚಿತಾ ತೂಮಿನಾಡು, ಸ್ವಪ್ನ ಉದ್ಯಾವರ, ರೂಪಾ ಮಿಯಾಪದವು ಸಹಿತ ಹಲ ವರು ಭಾಗವಹಿಸಿದರು. ಯೂನಿಟ್ ಕಾರ್ಯದರ್ಶಿ ಕುಮುದ ರಾಜ್ ಸ್ವಾಗತಿಸಿ, ಶರ್ಮಿಳಾ ವಿನಯ ಕುಮಾರ್ ವಂದಿಸಿದರು.