ಕೆ.ಕೆ. ಸ್ವಾಮಿಕೃಪಾರಿಗೆ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ ಪ್ರದಾನ
ಬದಿಯಡ್ಕ: ಮೊಗೇರ ಸರ್ವೀಸ್ ಸೊಸೈಟಿಯ ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ ಅವರಿಗೆ ನವದೆಹಲಿ ಆಂಧ್ರ ಭವನ ಸಭಾಂಗಣದಲ್ಲಿ ರಾಷ್ಟಿçÃಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುವಾರದಂದು ಜರಗಿದ ಸಮಾರಂಭದಲ್ಲಿ ಬಿಎಸ್‌ಎ ರಾಷ್ಟ್ರೀಯ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ಪ್ರಶಸ್ತಿ ವಿತರಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಉದ್ಯೋಗ ಮತ್ತು ಎಸ್.ಸಿ. ಎಸ್.ಟಿ. ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವ ರಾಜ್ ಕುಮಾರ್ ಆನಂದ್‌ಜಿ, ಕರೋಲ್‌ಬಾಗ್ ಶಾಸಕ ವೆಂಕಟೇಶ ರವಿಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಮೊಗೇರ್ ಸರ್ವೀಸ್ ಸೊಸೈಟಿ ಕಾಸರಗೋಡು ಸಂಘಟನೆಗೆ ನೀಡಿದ ಅತ್ಯುತ್ತಮ ಸೇವಾ ಸಂಘ ರಾಷ್ಟ್ರೀಯ ಪ್ರಶಸ್ತಿ-೨೦೨೩ನ್ನು ಕಾರ್ಯದರ್ಶಿ ಕೃಷ್ಣನ್ ಕೆ.ಕೆ.ಸ್ವಾಮಿಕೃಪಾ ಅವರು ಪಡೆದುಕೊಂಡರು.