ಕೆ.ಜೆ.ಎಂ. ಸಿರಾಜುಲ್ ಹುದಾ ರಸ್ತೆ ಡಾಮರು ಕಿತ್ತು ಹೋಗಿ ಸಂಚಾರ ದುಸ್ತರ

ಮಂಜೇಶ್ವರ : ಮಂಜೇಶ್ವರ ಕೆ ಜೆ ಎಂ ನಿಂದ ಸಿರಾಜುಲ್ ಹುದಾ ತನಕ ವಿರುವ ಒಂದೂವರೆ ಕಿಲೋ ಮೀಟರ್ ರಸ್ತೆ ಹದೆಗೆಟ್ಟು ಸಂಚಾರ ದುಸ್ತರವಾಗಿದೆ. ಕಾಲ್ನಡಿಗೆಯಿಂದ ಸಾಗಲು ಕೂಡ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ. ಇನ್ನು ಮಳೆಗಾಳ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಡಾಮಾರು ಕಿತ್ತು ಹೋದ ರಸ್ತೆಯ ಹೆÀÆಂಡಗಳಲ್ಲಿ ನೀರು ತುಂಬಿಕೊAಡÀÄ ವಾಹನ ಸವಾರರಿಗಷ್ಟೇ ಅಲ್ಲದೇ ಪಾದಚಾರಿಗÀಳಿಗೂ ತೊಂದರೆ ಉಂಟಾಗಲಿದೆ. ಮಚ್ಚಂಪ್ಪಾಡಿ, ಪಾವೂರು, ಚೌಕಿ ಬಡಾಜೆ, ಅಂಬಿತ್ತಡಿ, ಕೆದುಂಬಾಡಿ ಮೊದಲಾದ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆ ಡಾಮಾರು ಸಂಪೂರ್ಣ ಕಿತ್ತು ಹೋಗಿ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಈ ಮಾರ್ಗವಾಗಿ ನಿತ್ಯ ನೂರಾರು ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಬಸ್‌ಗಳು ಸಂಚರಿಸುತ್ತಿದೆ. ಒಂದೂವರೆ ಕಿಲೋ ಮೀಟರ್ ರಸ್ತೆ ದುರಸ್ತಿಗೆ ಸುಮಾರು 90 ಲಕ್ಷ ರೂ ಫಂಡ್ ಬೇಕಾಗಿದೆ. ಇದು ಶಾಸಕರ ನಿಧಿಯಿಂದ ಮಾತ್ರ ಸಾಧ್ಯವೆಂದು ಸ್ಥಳೀಯರು ಹೇಳುತಿದ್ದಾರೆ. ಶಾಸಕರು ಈ ಬಗ್ಗೆ ಭರವಸೆಯನ್ನು ನೀಡಿದರೂ ಕಾಮಗಾರಿ ಮಾತ್ರ ಮರೀಚಿಕೆಯಾಗಿಯೇ ಉಳಿದಿರುವುದಾಗಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

You cannot copy contents of this page