ಕೆ. ಮುರಳೀಧರನ್ ಕೂಡಾ ಬಿಜೆಪಿ ಸೇರ್ಪಡೆಗೆ ದಾರಿ ಸುಗಮವಾಗಿದೆ-ಪದ್ಮಜಾ

ಕಣ್ಣೂರು: ಕಾಂಗ್ರೆಸ್ ನೇತಾರ ಕೆ. ಮುರಳೀಧರನ್ ಕೂಡಾ ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ದಾರಿ ಸುಗಮಗೊಂಡಿದೆಯೆಂದು ಅವರ ಸಹೋದರಿಯೂ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ ಪದ್ಮಜಾ ವೇಣುಗೋಪಾಲ್ ತಿಳಿಸಿದ್ದಾರೆ.

ನರೇಂದ್ರಮೋದಿಯವರ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಮಹಿಳೆಯ ರೊಂದಿಗೆ ತೋರಿಸುವ ಗೌರವವೇ ತಾನು ಬಿಜೆಪಿಗೆ ಸೇರ್ಪಡೆ ಗೊಳ್ಳಲು ಕಾರಣವೆಂದು ಅವರು ತಿಳಿಸಿದರು.

ಕಣ್ಣೂರು ಲೋಕಸಭಾ ಕ್ಷೇತ್ರ ಎನ್‌ಡಿಎ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸನ್ನು ರಕ್ಷಿಸಲು ಆ ಪಕ್ಷದ ಈಗಿನ ನೇತಾರರಿಗೆ ಸಾಧ್ಯವಿಲ್ಲ. ಒಂದು ಸಮಸ್ಯೆಯನ್ನು ಕೂಡಾ ಆಲಿಸಲು  ಯಾರು ಇಲ್ಲದ ಸ್ಥಿತಿ ಕಾಂಗ್ರೆಸ್‌ನಲ್ಲಿ  ಈಗಿನದ್ದಾಗಿದೆ ಯೆಂದೂ ಅವರು ತಿಳಿಸಿದರು. ಜೊತೆಗಿದ್ದವರನ್ನು ಕೂಡಾ ವಂಚಿಸುವ ಸ್ವಭಾವ ಕಾಂಗ್ರೆಸ್ ನೇತಾರರದ್ದಾಗಿದೆ. ಬಿಜೆಪಿಗೆ ಇನ್ನೂ ಕೂಡಾ ಧಾರಾಳ ಮಂದಿ ಸೇರ್ಪಡೆ ಗೊಳ್ಳಲಿದ್ದಾರೆ. ಕರುಣಾಕರನ್‌ರ ಬಗ್ಗೆ ಹಕ್ಕು ಮಂಡಿಸಿ ಕಾಂಗ್ರೆಸ್‌ನವರಾರೂ ಮುಂದೆ ಬರಬೇಕಾಗಿಲ್ಲ. ಈ ಬಾರಿ ತೃಶೂರಿನಲ್ಲಿ ಬಿಜೆಪಿ  ಖಾತೆ ತೆರೆಯುವುದು ಖಚಿತ ಎಂದೂ ಪದ್ಮಜಾ ತಿಳಿಸಿದರು. ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು.

RELATED NEWS

You cannot copy contents of this page