ಕೇರಳದಲ್ಲಿ ಸರಕಾರದಿಂದ ದರೋಡೆ-ಕಾಂಗ್ರೆಸ್ ಆರೋಪ

ಮಂಜೇಶ್ವರ: ಬೆಲೆಯೇರಿಕೆ, ನಿರುದ್ಯೋಗ, ಭ್ರಷ್ಟಾಚಾರ ಸಮಸ್ಯೆಗಳಿಂದ ತತ್ತರಿಸುತ್ತಿರುವ ಕೇರಳದ ಜನತೆಯನ್ನು ಪಿಣರಾಯಿ ಸರಕಾರವು ಪೀಡಿಸುತ್ತಿದ್ದು, ವಿದ್ಯುತ್ ಬಿಲ್ ಏರಿಕೆಯು ಇದರ ಇತ್ತೀಚಿನ ದರೋಡೆಯಾಗಿದೆ. ಈ ಹೊಣೆಗೇಡಿ ಸರಕಾರವನ್ನು ಕಿತ್ತೊಗೆಯಲು ಜನತೆಯು ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ವಿದ್ಯುತ್ ದರ ಏರಿಕೆ ಪ್ರತಿಭಟಿಸಿ ಮಂಜೇಶ್ವರ ಕೆಎಸ್‌ಇಬಿ ಕಚೇರಿಗೆ ನಡೆಸಿದ ಪ್ರತಿಭಟನಾ ಮಾರ್ಚ್‌ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಉದ್ಘಾಟಿಸಿದರು.

ರಾಜ್ಯದ ಜನತೆ ಈ ಸರಕಾರದಿಂದ ಬೇಸತ್ತಿದ್ದಾರೆ. ಹಗರಣಗಳು,ಸುಲಿಗೆ, ಹಿಂಸೆಗಳನ್ನು ಎಡರಂಗ ಸರಕಾರ ತನ್ನ ಸಾಧನೆ ಎಂದು ಭಾವಿಸಿದಂತಿದೆ. ಕಟ್ಟಡ ನಿರ್ಮಾಣ ಪರ್ಮಿಟ್ ಶುಲ್ಕ ಹೆಚ್ಚಳ, ನೀರಿನ ಬಿಲ್ ಹೆಚ್ಚಳ, ಹಸಿರು ಕ್ರಿಯಾ ಸೇನೆ ಯೂಸರ್ ಫೀ ಎಂದೆಲ್ಲಾ ಬಡಜನರ ಹಣ ಲೂಟಿ ಮಾಡುವ ಜೊತೆಗೆ  ಉದ್ಯೋಗ ಕೊಡುವ ಭರವಸೆ ನೀಡಿ ಕೋಟ್ಯಂತರ ಸುಲಿಗೆ ಮಾಡಿದ್ದಾರೆ ಎಂದು ಸೋಮಶೇಖರ ಆರೋಪಿಸಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸದ ಬಳಿಯಿಂದ ಮಂಜೇಶ್ವರ ಕೆಎಸ್‌ಇಬಿ ಕಚೇರಿಗೆ ನಡೆಸಿದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ನೇತಾರರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಹನೀಫ್ ಪಡಿಞಾರ್, ದಾಮೋದರ ಮಾಸ್ತರ್, ಪುರುಷೋತ್ತಮ ಅರಿಬೈಲು, ಮನ್ಸೂರ್ ಕಂಡತ್ತಿಲ್, ಸತ್ಯನ್ ಸಿ ಉಪ್ಪಳ, ಗೀತಾ ಬಂದ್ಯೋಡು, ಶಾಂತಾ ಆರ್ ನಾಯ್ಕ್, ಇರ್ಷಾದ್ ಮಂಜೇಶ್ವರ, ತಾಹಿರಾ ಉಪ್ಪಳ, ಪ್ರಶಾಂತಿ ಮಂಜೇಶ್ವರ, ಜೆಸ್ಸಿ ಕಣ್ವತೀರ್ಥ, ವೇದಾವತಿ, ಸುಮಯ್ಯಾ, ಓಂಕೃಷ್ಣ, ಇಬ್ರಾಹಿಂ ಐಆರ್‌ಡಿಪಿ, ಖಲೀಲ್ ಬಜಾಲ್, ಮೊಹಮ್ಮದ್ ಮಜಾಲ್, ನಾಗೇಶ್ ಮಂಜೇಶ್ವರ, ವಿನೋದ್ ಪಾವೂರು, ಗಣೇಶ್ ಪಾವೂರು, ಪಿ.ಎಂ. ಖಾದರ್, ರಾಜೇಶ್ ನಾಯ್ಕ್ ಹೇರೂರು, ಪ್ರದೀಪ್ ಶೆಟ್ಟಿ ಉಪ್ಪಳ, ರಂಜಿತ್ ಮಂಜೇಶ್ವರ, ಕೃಷ್ಣನ್ ಅಡ್ಕತ್ತೊಟ್ಟಿ, ಬಾಸಿತ್ ತಲೆಕ್ಕಿ, ಗಂಗಾಧರ್ ಕೆ.ಎಸ್, ಸದಾಶಿವ ಕೆ, ಗೋಪಾಲ ಮೂಲ್ಯ, ನವೀನ್ ಚೆರುಗೋಳಿ, ಮುಸ್ತಫಾ ಮಂಜೇಶ್ವರ, ಕೆ.ವಿ. ರಮಣನ್, ಝಕರಿಯಾ ಶಾಲಿಮಾರ್, ನೈನಾರ್ ಅಹ್ಮದ್, ಮಾಲಿಂಗ ಮಂಜೇಶ್ವರ, ಗಣೇಶ್ ಶೆಟ್ಟಿಗಾರ್, ಹಾರಿಸ್ ಪಾರೆ ಕಟ್ಟ ಉಪಸ್ಥಿತರಿದ್ದರು. ದಿವಾಕರ್ ಎಸ್ ಜೆ ಸ್ವಾಗತಿಸಿ, ಮೊಹಮ್ಮದ್ ಸೀಗಂದಡಿ ವಂದಿಸಿದರು.

RELATED NEWS

You cannot copy contents of this page