ಕೇರಳದಲ್ಲಿ ಹವಾಲಾ ಹಣ ಈಗ ಕ್ರಿಪ್ಟೋ ಕರೆನ್ಸಿ ಮೂಲಕ ರವಾನೆ
ತಿರುವನಂತಪುರ: ಕೇರಳದಲ್ಲಿ ಭರಪೂರವಾಗಿ ನಡೆಯುತ್ತಿರುವ ಹವಾಲಾ ಹಣದ ವ್ಯವಹಾರವನ್ನು ಈಗ ಕ್ರಿಫ್ಟೋ ಕರೆನ್ಸಿ ಮೂಲಕ ನಡೆಸುವ ಹೊಸ ದಾರಿಯನ್ನು ಹವಾಲಾ ದಂಧೆಯವರು ಅನುಸರಿಸತೊಡಗಿದ್ದಾರೆಂಬ ಮಾಹಿತಿ ಕೇಂದ್ರ ಗೃಹ ಸಚಿವಾಲಯಕ್ಕೆ ಲಭಿಸಿದೆ.
ಇಂಟರ್‌ನೆಟ್‌ನ ಭೂಗತ ಡಾರ್ಕ್ ವೆಬ್ ಮೂಲಕ ಕಳೆದ ಮೂರು ವರ್ಷದಲ್ಲಿ ಸುಮಾರು 25 ಕೋಟಿ ರೂ.ಗಳ ಕಾಳಧನವನ್ನು ಕರೆನ್ಸಿ ಮೂಲಕ ಅತ್ತಿತ್ತ ರವಾನಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿಯೂ ಕೇಂದ್ರ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.
ಹವಾಲಾ ವ್ಯವಹಾರ ನಡೆಸುತ್ತಿರುವವರ ಮೇಲೆ ಕೇಂದ್ರ ತನಿಖಾ ತಂಡಗಳು ಇತ್ತೀಚೆಗಿನಿಂದ ಹದ್ದಿನ ಕಣ್ಣಿರಿಸಿ ಅದರ ಎಲ್ಲಾ ವ್ಯವಹಾರವನ್ನೂ ಸೂಕ್ಷ್ಮವಾದ ರೀತಿಯಲ್ಲಿ ಪರಿಶೀಲಿಸತೊಡಗಿದೆ. ಇದನ್ನು ಮನಗಂಡ ಹವಾಲಾ ದಂಧೆಯವರು ತಮ್ಮ ವ್ಯವಹಾರವನ್ನು ಕ್ರಿಫ್ಟೋ ಕರೆನ್ಸಿ ನಡೆಸುವ ಹೊಸ ಯತ್ನ ಆರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇಂತಹ ಕ್ರಿಫ್ಟೋ ಕರೆನ್ಸಿ ವ್ಯವಹಾರದ ಮೇಲೂ ಕೇಂದ್ರ ಸರಕಾರ ಈಗ ತೀವ್ರ ನಿಗಾ ಇರಿಸತೊಡಗಿದೆ.