ಕೇರಳೋತ್ಸವ ಸ್ಪರ್ಧೆ ನಡೆಸದೆ ವರ್ಕಾಡಿಯಲ್ಲಿ ಯುವಜನರಿಗೆ ವಂಚನೆ-ಯೂತ್‌ಲೀಗ್

ವರ್ಕಾಡಿ: ವರ್ಕಾಡಿ ಪಂ ಚಾಯತ್ ಕೇರಳೋತ್ಸವ ನಡೆಸದೆ ಪಂಚಾಯತ್‌ನ ಯುವಜನಾಂಗದ ಕಲಾ ಸಾಮರ್ಥ್ಯವನ್ನು ಪ್ರೋತ್ಸಾ ಹಿಸಲಿರುವ ಅವಕಾಶವನ್ನು ಇಲ್ಲದಂತೆ ಮಾಡಿದೆಯೆಂದು ಯೂತ್ ಲೀಗ್ ಪಂ. ಸಮಿತಿ ಆರೋಪಿಸಿದೆ. ಕೇರಳದ ಎಲ್ಲಾ ಪಂಚಾಯತ್‌ಗಳಲ್ಲೂ ಕೇರಳೋತ್ಸವವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಿ ಬ್ಲೋಕ್ ಪಂಚಾಯತ್‌ಮಟ್ಟದ ಸ್ಪರ್ಧೆಗೆ  ಆಯ್ಕೆ ಮಾಡುವಾಗ ವರ್ಕಾಡಿ ಪಂ.ನಲ್ಲಿ ಸ್ಪರ್ಧೆ ನಡೆಸದೆ ಕಳೆದ ವರ್ಷದ ಸ್ಪರ್ಧಾ ವಿಜೇತರನ್ನು ಬ್ಲೋಕ್ ಸ್ಪರ್ಧೆಗೆ ಕಳುಹಿಸಲು ತೀರ್ಮಾನಿಸಿರುವುದಾಗಿ  ಯೂತ್ ಲೀಗ್ ಆರೋಪಿಸಿದೆ.

ಪಂಚಾಯತ್‌ನ ಈ ಯುವಜನ ವಂಚನೆ ವಿರುದ್ಧ ಪ್ರತಿಭಟಿಸಲು ಯೂತ್ ಲೀಗ್ ತೀರ್ಮಾನಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಹಾರಿಸ್ ಪಾವೂರು, ಬಿ.ಎ. ಅಬ್ದುಲ್ ಮಜೀದ್, ಲತೀಫ್ ಕಜೆ, ಸುಬೈರ್, ಕರೀಂ ಪಾತೂರು, ಲತೀಫ್ ನಡುಬೈಲ್, ಇಬ್ರಾಹಿಂ ಕಜೆ, ಮೊಯ್ದೀನ್ ಕುಂಞಿ, ಸಮೀರ್, ಫಾರೂಖ್ ಮಾತನಾಡಿದರು.

RELATED NEWS

You cannot copy contents of this page