ಕಾಸರಗೋಡು: ಕೇರಳ ಪ್ರದೇಶ್ ಮೀನು ಕಾರ್ಮಿಕರ ಸಂಘ ಬಿಎಂಎಸ್ ಇದರ ಜಿಲ್ಲಾ ಸಮ್ಮೇಳನ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು. ಮೀನು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಂಬ್ರಾಣರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಎರ್ನಾಕುಳಂ ಉದ್ಘಾಟಿಸಿ ಜಿಲ್ಲೆಯ ಮೀನು ಕಾರ್ಮಿಕರು ಅನುಭವಿಸುವ ತೊಂದರೆಗಳಿಗೆ ಸರಕಾರ ಪ್ರತ್ಯೇಕ ಪ್ಯಾಕೇಜ್ ಮಂಜೂರು ಮಾಡಬೇಕೆಂ ದು ಸರಕಾರಕ್ಕೆ ಒತ್ತಾಯಿಸಿದರು. ಜಿಲ್ಲಾ ಉಪಾಧ್ಯಕ್ಷ ಕೆ.ಎ. ಶ್ರೀನಿವಾಸನ್ ಶುಭಾಶಂಸನೆಗೈದರು. ನೂತನ ಪದಾಧಿಕಾರಿಗಳು ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಘೋಷಿಸಿದರು. ಅಧ್ಯಕ್ಷರಾಗಿ ದಿನೇಶ್ ಬಂಬ್ರಾಣ, ಉಪಾಧ್ಯ ಕ್ಷರಾಗಿ ಶರತ್ ಕಾಸರಗೋಡು, ಜನಾರ್ದನ ಕಾಸರಗೋಡು, ಪ್ರಜಿತ್ ಕೀಯೂರು, ಮನೋಜ್ ಚೇಟು ಕುಂಡು, ಕಾರ್ಯದರ್ಶಿಯಾಗಿ ರಮೇಶ್ ಕಾಸರಗೋಡು, ಮಜೀಶ್ ಕಾಸರಗೋಡು, ಶ್ರೀರಾಗ್ ಕೀಯೂರು, ಪ್ರಜಿತ್ ಕುಂಬಳೆ, ಪ್ರಿಯೇಶ್ ಕುಂಬಳ, ಕೋಶಾಧಿಕಾರಿ ಯಾಗಿ ರಂಜಿತ್ ಕಾಸರಗೋಡು ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರಮೇಶ್ ಕಡಪ್ಪುರ ಸ್ವಾಗತಿಸಿ, ಜನಾರ್ದನ ಕಡಪ್ಪುರ ವಂದಿಸಿದರು.
