ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ವಾರ್ಷಿಕ ಮಹಾಸಭೆ
ಮಂಜೇಶ್ವರ: ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ಮಂಜೇಶ್ವರ ಘಟಕದ ವಾರ್ಷಿಕ ಮಹಾಸಭೆ ಹೊಸಂಗಡಿ ನಿತ್ಯಾನಂದ ಧ್ಯಾನಮಂದಿರದಲ್ಲಿ ಜರಗಿತು. ಉದಯಶಂಕರ್ ಭಟ್ ಅಧ್ಯಕ್ಷತೆ ವಹಿಸಿದರು. ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಪಿ. ಕುಂಞಂಬು ನಾಯರ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ರವಿಚಂದ್ರ ಉದ್ಯಾವರ, ಬ್ಲೋಕ್ ಕಾರ್ಯದರ್ಶಿ ಶೀನಪ್ಪ ಪೂಜಾರಿ, ಪ್ರೊ. ಬಿ. ಬಾಟಿಯಾ, ಪಾರ್ವತಿ, ಶಶಿಪ್ರಭ ಟೀಚರ್, ರಾಜಮ್ಮಾಳ್, ಭಾಸ್ಕರ ರಾವ್ ಕೆಡೆಂಜಿ ಶುಭ ಕೋರಿದರು.
ಘಟಕ ಕಾರ್ಯದರ್ಶಿ ಪುಂಡಲೀಕ ನಾಯಕ್ ಸ್ವಾಗತಿಸಿ, ವಾಸುದೇವ ಶೆಟ್ಟಿ ವಂದಿಸಿದರು.