ಕೇರ್‌ವೆಲ್ ಆಸ್ಪತ್ರೆ ಸ್ಥಾಪಕ ನಿರ್ದೇಶಕ ಅಬ್ದುಲ್ ರಶೀದ್ ನಿಧನ

ಕಾಸರಗೋಡು: ನಗರದ ಕೇರ್‌ವೆಲ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್‌ನ ಸ್ಥಾಪಕ ನಿರ್ದೇಶಕ ಡಾ| ಸಿ.ಪಿ. ಅಬ್ದುಲ್ ರಶೀದ್ (77) ನಿಧನಹೊಂದಿದರು. ಮಂಗಳೂರು ಮಾರ್ಗನ್ಸ್‌ಗೇಟ್ ನಿವಾಸಿಯಾಗಿದ್ದಾರೆ. ಚೆಮ್ನಾಡು ಸಿ.ಪಿ. ಅಬ್ದುಲ್ಲ-ಕೆ.ಸಿ. ಮರಿಯಂ ದಂಪತಿ ಪುತ್ರನಾಗಿದ್ದಾರೆ.

ಮೃತರು ಪತ್ನಿ ಆಯಿಷಾ ನಸೀರ, ಪುತ್ರ ಸಿ.ಪಿ. ಮಹಮ್ಮದ್ ರಿಯಾಸ್, ಸೊಸೆ ಫಾತ್ವಿಮ ಇಲ್ಯಾಸ್,  ಸಹೋದರರಾದ ಡಾ| ಸಿ.ಪಿ. ಅಬ್ದುಲ್ ರಹ್‌ಮಾನ್, ಸಹೋದರಿ ಡಾ| ಸಿ.ಪಿ. ಮೈಮೂನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page