ಕೊಂಡೆವೂರು ಮಠದಲ್ಲಿ ಯಶಸ್ವಿಯಾದ ಕೊರಗ ಸಮಾಜ ಸಂಗಮ

ಉಪ್ಪಳ: ಕಾಸರಗೋಡು ಜಿಲ್ಲೆ ಕೊರಗ ಸಮಾಜ ಸಂಗಮ ಸಮಿತಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೊರಗ ಸಮಾಜ ಸಂಗಮ ನಿನ್ನೆ ಕೊಂಡೆವೂರು ಮಠದಲ್ಲಿ ನಡೆಯಿತು. ಉಪ್ಪಳ ಪೇಟೆಯಿಂದ ಶೋಭಾಯಾತ್ರೆ ನಡೆಯಿತು. ಶ್ರೀ ಯೋಗಾನಂದ ಸರ ಸ್ವತೀ ಸ್ವಾಮೀಜಿ ಹಾಗೂ ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಸಮಾಜದ ಮಕ್ಕಳ ಕುಣಿತ ಭಜನೆ, ಕೊರಗ ನೃತ್ಯ, ಮುತ್ತುಕೊಡೆ, ಡೋಲು ಸಹಿತ ಹಲವು ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು. ಬಳಿಕ ಮಠದಲ್ಲಿ ನಡೆದ ಕೊರಗ ಸಮಾಜ ಸಂಗಮವನ್ನು ರಾಜ್ಯಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು ಉದ್ಘಾಟಿಸಿದರು. ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಕಟೀಲು ಕ್ಷೇತ್ರದ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ, ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಸಮಾಜಸೇವಕ ಅಶೋಕ್ ಕುಮಾರ್ ಹೊಳ್ಳ, ಕೊರಗ ಸಮಾಜ ಸಂಗಮ ಸಮಿತಿ ಅಧ್ಯಕ್ಷ ಸಂಜೀವ ಪುಳಿಕೂರು, ಹಾಗೂ ಸಮಾಜದ ಹಿರಿಯ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊರಗ ಸಮಾಜದಿಂದ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಸಾಧನೆ ಮಾಡಿದ ಸರಿತಾ ಬಾಯಾರು, ಮೀನಾಕ್ಷಿ ಬೊs್ರ‍್ಪu್ಧಡಿ, ಶೋಭಿತ ಪುಳಿಕೂರು, ಹಿಂದಿ ರಾಮಾಯಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಹಾಲಕ್ಷಿ÷್ಮÃ ಗೌರೀ ಮೂಲೆ, ಕ್ರೀಡಾಪಟುಗಳಾದ ದಿನೇಶ್ ಪುಳಿಕೂರು, ರಘುನಾಥ ಕುಳೂರು ಇವರನ್ನು ಗಣ್ಯರು ಸನ್ಮಾನಿ ಸಿದರು. ಗಾಯತ್ರಿ ಕೊಂಡೆವೂರು ಪ್ರಾರ್ಥನೆ ಹಾಡಿದರು. ರಘುರಾಜ್ ಕುಳೂರು ಸ್ವಾಗತಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ.ಕೆ ಶ್ರೀಕಾಂತ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ವೀರೇಂದ್ರ ಕುಮಾರ್, ಸಂಜೀವ ಪುಳಿಕೂರು ಮೊದಲಾದವರು ಉಪ ಸ್ಥಿತರಿದ್ದರು. ಸಾಂಸ್ಕöÈತಿಕ ಕಾರ್ಯಕ್ರಮ ದಂಗವಾಗಿ ಸಮಾಜದ ಸದಸ್ಯರಿಂದ ವಿವಿಧ ಸಾಂಪ್ರದಾAiÄಕ ನೃತ್ಯ ನಡೆಯಿತು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಉಮಾನಾಥ್ ವಂದಿಸಿದರು.

You cannot copy contents of this page